Sports News: ಹಾರ್ದಿಕ್ ಪಾಂಡ್ಯಾರ ತಾಯಿ ಮತ್ತು ಅಜ್ಜಿಯನ್ನು ಭೇಟಿ ಮಾಡಿದ ನಟಿ ನತಾಶಾ

Sports News: ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ ಮತ್ತು ಆತನ ಮಾಜಿ ಮಡದಿ ನತಾಶಾ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದರೂ, ಹಾರ್ದಿಕ್ ಮನೆಯವರ ಜತೆ ನತಾಶಾ ಸಂಬಂಧ ಉತ್ತಮವಾಗಿದೆ.

ಸಾಮಾನ್ಯವಾಗಿ ಡಿವೋರ್ಸ್ ಬಳಿಕ ಜನ ಮನೆಗೆ ಹೋಗೋದು ಭೇಟಿಯಾಗೋದು ದೂರದ ಮಾತು. ಅವರು ಮುಖ ನೋಡೋಕ್ಕೂ, ಮಾತನಾಡೋಕ್ಕೂ ಇಚ್ಛಿಸುವುದಿಲ್ಲ. ಆದರೆ ಸೆಲೆಬ್ರಿಟಿಗಳ ಲೈಫಲ್ಲಿ ಹಾಗಲ್ಲ. ಅವರೆಲ್ಲ ಆಗಾಗ ಭೇಟಿಯಾಗುತ್ತಾರೆ. ನಾವು ಡಿವೋರ್ಸ್ ಪಡೆದರೂ ಫ್ರೆಂಡ್ಸ್ ಆಗಿದಿವಿ ಅಂತಾರೆ. ಪಾರ್ಟಿ ಆದಾಗ, ತಮ್ಮ ಹಾಲಿ ಪಾರ್ಟ್ನರ್ಸ್ ಜತೆ ಬಂದು ಎಂಜಾಯ್ ಮಾಡ್ತಾರೆ.

ಅದೇ ರೀತಿ ಹಾರ್ದಿಕ್ ಮಾಜಿ ಪತ್ನಿ ನತಾಶಾ ಕೂಡ ಹಾರ್ದಿಕ್ ಜತೆ ವಿಚ್ಛೇದನ ಪಡೆದರೂ, ಅವರ ಅಮ್ಮ-ಅಜ್ಜಿ ಸೇರಿ ಅವರ ಮನೆಯವರನ್ನು ಭೇಟಿಯಾಗಿದ್ದಾರೆ. ಗುಜರಾತ್‌ನ ವಡೋದರಾದಲ್ಲಿರುವ ಹಾರ್ದಿಕ್ ಮನೆಗೆ ಹೋಗಿ, ಅಲ್ಲಿ ನತಾಶಾ ಮತ್ತು ಅವರ ಮಗ ಅಗಸ್ತ್ಯ, ಹಾರ್ದಿಕ್ ಅವರ ಅಜ್ಜಿ, ಅಮ್ಮ, ಸಹೋದರಿ, ಸಹೋದರನನ್ನು ಭೇಟಿಯಾಗಿ, ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ. ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಕೂಡ ಮಾಡಿದ್ದಾರೆ.

About The Author