Tamilunadu News: ತಮಿಳುನಾಡಿನ ತೆಂಕಾಸಿ ಎಂಬಲ್ಲಿ 70 ವರ್ಷದ ವೃದ್ಧೆ ಬಸ್ ಹತ್ತಲು ಹೋಗಿ, ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೃದ್ಧೆ ಸರಿಯಾಗಿ ಬಸ್ ಹತ್ತುವ ಮುನ್ನವೇ ಅರ್ಜೆಂಟ್ ಆಗಿ ಡ್ರೈವರ್ ಬಸ್ ಶುರು ಮಾಡಿದ್ದಾನೆ. ಈ ವೇಳೆ ವೃದ್ಧೆ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಆಕೆಯನ್ನು ಎತ್ತಲು ಅಲ್ಲೇ ಇದ್ದ ಕೆಲವರು ಮತ್ತು ಕಂಡಕ್ಟರ್ ಪ್ರಯತ್ನಿಸಿದರು ಕೂಡ ಆಕೆ ಬಿದ್ದ ಪೆಟ್ಟಿಗೆ ಮೂರ್ಛೆ ಹೋಗಿದ್ದಾಳೆ. ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕ“ಂಡೋಯ್ದರೂ ಆಕೆ ಸಾವನ್ನಪ್ಪಿದ್ದಾಳೆಂದು ವರದಿಯಾಗಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಇದಕ್ಕೆ ಹಲವರು ಬೇರೆ ಬೇರೆ ರೀಿತಿಯಲ್ಲಿ ಕಾಮೆಂಟ್ಸ್ ಮಾಡಿದ್ದಾರೆ. ಡ್ರೈವರ್ಗೆ ಹಿಗ್ಗಾಮುಗ್ಗಾ ಬೈದಿರುವ ಜನ, ಹತ್ತುವವರನ್ನು ಅಹಂಕಾರಿಗಳು ಗಮನಿಸುವುದೇ ಇಲ್ಲ. ಅವರಿಗೆ ಬಸ್ ಓಡಿಸಿದೋಷ್ಟೇ ತಿಳಿದಿದೆ. ಅವರ ಮನೆಯವರಾಗಿದ್ರೆ ಈ ರೀತಿ ಮಾಡುತ್ತಿದ್ರಾ ಅಂತಾ ಪ್ರಶ್ಮಿಸಿದ್ದಾರೆ.
ಪ್ರತಿಯ“ಬ್ಬರೂ ಡ್ರೈವರ್ ಮಾಡಿರೋದು ತಪ್ಪು ಅಂತಾ ಹೇಳಿದ್ದು, ವೃದ್ಧೆಗೆ ಪೂರ್ತಿಯಾಗಿ ಹತ್ತಿ ಕೂರುವಷ್ಟು ಸಮಯ ನೀಡಬೇಕಿತ್ತು ಎಂದಿದ್ದಾರೆ. ಒಟ್ಟಾರೆಯಾಗಿ, ಬಸ್ ಡ್ರೈವರ್ ರೂಪದಲ್ಲಿ ಬಂದ ಯಮ ವೃದ್ಧೆಯ ಜೀವ ಕಸಿದಿದ್ದಾನೆ.
Who is actually at fault here?
📍 Kadayam, Tenkasi, Tamil Nadu: 70-year-old lady Subbammal lost her life after falling while boarding a moving government bus. CCTV is going viral.
Bus moved before full boarding; onboard staff could have assisted but didn’t.
Bus driver should… pic.twitter.com/WKpoMIaWxX— Deadly Kalesh (@Deadlykalesh) April 28, 2026




