Sarojni Diaries Part 1: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ್ದ ಡೆನಿಮ್ ಜಾಕೇಟ್‌ನ ಹಾರರ್ ಕಥೆ

Delhi Horror Story: ದೆಹಲಿ ಪ್ರವಾಸಕ್ಕೆ ಹೋಗುವವರಿಗೆ ಹಲವರು ಸರೋಜ್ನಿ ಮಾರ್ಕೇಟ್‌ಗೆ ಹೋಗಿ ಅಲ್ಲಿ ಬ್ರ್ಯಾಂಡೆಡ್ ಬಟ್ಟೆಗಳು ಕಡಿಮೆ ಬೆಲೆಗೆ ಸಿಗುತ್ತದೆ ಅನ್ನೋ ಸಜೆಶನ್ ನೀಡುತ್ತಾರೆ. ಅಲ್ಲದೇ, ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ, ಬ್ಯಾಗ್, ಇನ್ನೂ ಹಲವು ವಸ್ತುಗಳು ಇಲ್ಲಿ ಸಿಗುತ್ತದೆ. ಆದರೆ ಅದರ ಹಿಂದಿನ ಸತ್ಯದ ಬಗ್ಗೆ ಹಲವರಿಗೆ ತಿಳಿದಿಲ್ಲ.

ಆದ್ರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದ ಮೂಲಕ ಸರೋಜ್ನಿ ಮಾರ್ಕೇಟ್ ರಿಯಾಲಿಟಿ ಜನರಿಗೆ ತಿಳಿಯುತ್ತಿದೆ. ಸರೋಜ್ನಿ ಮಾರ್ಕೇಟ್‌ನಿಂದ ಬಟ್ಟೆ ಖರೀದಿಸಿದವರು, ಅನುಭವಿಸಿದ ನಕಾರಾತ್ಮಕ ಅನುಭವವನ್ನು ಹಂಚಿಕೊಂಡಿದ್ದಾರೆ.

ದೆಹಲಿಯ ಹಾಸ್ಟೇಲ್ ಒಂದರಲ್ಲಿ ಇದ್ದು, ವಿದ್ಯಾಭ್ಯಾಸ ಮಾಡುವ ಯುವತಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮಗಾಾದ ಅನುಭವವನ್ನು ಶೇರ್ ಮಾಡಿದ್ದಾರೆ. ಆಕೆ ಸರೋಜ್ನಿ ಮಾರ್ಕೇಟ್‌ಗೆ ಹೋಗಿ ಅಲ್ಲಿ, 1 ಡೆನಿಮ್ ಜಾಕೇಟ್ ಖರೀದಿ ಮಾಡಿದ್ದಳಂತೆ. ಅದರ ಜೊತೆ ಇನ್ನೂ ಹೆಚ್ಚು ಬಟ್ಟೆ ಖರೀದಿಸಿದ್ದಳು.

ಆದ್ರೆ ಅವಳಿಗೆ ಹೆಚ್ಚು ಇಷ್ಟವಾಗಿದ್ದು, ಈ ಡೆನಿಮ್ ಜಾಕೇಟ್ . ಅದನ್ನು ಹಾಕೊಂಡ್ರೆ ಸಖತ್ ಕೂಲ್ ಆಗಿ ಕಾಣ್ತಾಳೆ ಅಂತಾ ಅವಳ ಸ್ನೇಹಿತರು ಅವಳಿಗೆ ಹೇಳಿದ್ರಂತೆ. ಅದಕ್ಕೆ ಅವರು, ಆ ಡೆನಿಮ್ ಜಾಕೇಟ್ ಹೆಚ್ಚು ಯ್ಯೂಸ್ ಮಾಡ್ತಿದ್ಲಂತೆ. ಆದರೆ ಅವಳು ಯಾವಾಗ ಆ ಜಾಕೇಟ್ ಬಳಸುತ್ತಾಳೋ, ಆ ದಿನ ಎಲ್ಲಾ ಹಾಳಾಗಿ ಹೋಗೋದಂತೆ.

ಅಲ್ಲದೇ 1 ದಿನ ಆಕೆ ಡೆನಿಮ್ ಜಾಕೇಟ್‌ನ್ನಾ ತನ್ನ ಹಾಸ್ಟೇಲ್ ರೂಮ್‌ನಲ್ಲಿ ಇದ್ದ ಚೇರ್ ಮೇಲೆ ಇಟ್ಟು ಮಲಗಿದ್ದಳಂತೆ. ಆಗ ಅವಳ ಕೋಣೆಯಲ್ಲಿ ಯಾರೋ, ಒದ್ದೆ ಕಾಲಿನಲ್ಲಿ ಓಡಾಡಿದಂತೆ ಸೌಂಡ್ ಬಂತಂತೆ. ಅಲ್ಲದೇ ಮರುದಿನ ಅವಳ ಕೋಣೆಯಲ್ಲಿದ್ದ ಕಪಾಟಿನಲ್ಲಿ ಆ ಜಾಕೇಟ್ ಇರಿಸಿದಾಗ, ಯಾರೋ ಒಳಗಿನಿಂದ ನಾಕ್ ಮಾಡಿದ ಅನುಭವ ಅವಳಿಗಾಯಿತಂತೆ.

ಆಗ ರೂಮೇಟ್ ಬಳಿ ಅಂದ್ರೆ ಅವಳು ಯಾರ ಜೊತೆಗೆ ಶಾಪಿಂಗ್‌ಗೆ ಹೋಗಿದ್ಲೋ, ಅವಳ ಬಳಿ ಈ ಅನುಭವ ಹೇಳಿದಾಗ, ಇಬ್ಬರೂ ಸೇರಿ, ಕಪಾಟ್ ಬಾಗಿಲು ತೆಗೆದಾಗ ಒಳಗೆ ಯಾರೂ ಇರಲಿಲ್ಲ. cರುದಿನ ಇಬ್ಬರೂ ತಮ್ಮ ಕೋಣೆಯೊಳಗೆ ತಮಗಾದ ಅನುಭವವನ್ನು ಶೇರ್ ಮಾಡಿದರು. ಅವರಿಬ್ಬರು ಮಾತನಾಡುವಾಗ, ಸರೋಜ್ನಿ ಮಾರ್ಕೇಟ್‌ನಿಂದ ನಾವು ಬಟ್ಟೆ ಖರೀದಿ ಮಾಡಿದಾಗಿನಿಂದ ರೂಮ್‌ನಲ್ಲಿ ಈ ಸಮಸ್ಯೆ ಶುರುವಾಗಿದೆ. ಅದನ್ನೆಲ್ಲ ಸೇರಿಸಿ, ನಾವು ವಾಶ್ ಮಾಡೋಣವೆಂದು ಹೇಳಿದರು.

ಬಳಿಕ ಎಲ್ಲ ಬಟ್ಟೆ ವಾಶ್ ಮಾಡಿ, ಕೊನೆಗೆ ಡೆನಿಮ್ ಜಾಕೇಟ್ ವಾಶ್ ಮಾಡುವಾಗ, ಅದರ ಹಿಂಭಾಗದಲ್ಲಿ ಕೆಂಪು ಬಣ್ಣದ ಸಿಂಬಾಲ್ ಕಂಡಿದೆ. ಇದನ್ನು ಕಂಡು ಇಬ್ಬರು ಹೆದರಿದ್ದಾರೆ. ಬಳಿಕ ಎಲ್ಲ ಬಟ್ಟೆ ವಾಶ್ ಮಾಡಿ, ಒಣಗಿಸಿ, ಊಟ ಮುಗಿಸಿ, ಮಲಗಿದ್ದಾರೆ.

ಈ ದಿನ ರಾತ್ರಿ ಆ ಡೆನಿಮ್ ಜಾಕೇಟ್ ಖರದಿಸಿದ ಯುವತಿಗೆ ನಿದ್ದೆ ಗಣ್ಣಿನಲ್ಲಿ ಯಾರೋ ಬಂದು ಕುತ್ತಿಗೆ ಹಿಸುಕಿದ ಅನುಭವವಾಗಿದೆ. ಮಧ್ಯರಾತ್ರಿ ಹೆದರಿ ಎದ್ದು ಕನ್ನಡಿ ನೋಡಿಕೊಂಡಾಗ, ಆಕೆಯ ಕುತ್ತಿಗೆಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಹಾಗಾಗಿದೆ. ಆಗ ಇಬ್ಬರೂ ಸೇರಿ, ಆ ಡೆನಿಮ್ ಜಾಕೇಟ್ ಬಿಸಾಕಿ ಬಿಡಬೇಕು ಎಂದು ನಿರ್ಧರಿಸಿದ್ದಾರೆ. ಮರುದಿನ ಬೆಳಿಗ್ಗೆ ಜಾಕೇಟ್ ಬಿಸಾಕಿ ಬಂದಿದ್ದಾರೆ. ಅದಾದ ಬಳಿಕ, ಅವರು ಆರಾಮವಾಗಿದ್ದಾರಂತೆ. ಇದೇ ರೀತಿಯ ಹಲವು ಕೇಸ್‌ಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.

About The Author