Sarojni Diaries: ಹಾಗಾದ್ರೆ ಸರೋಜ್ನಿ ಮಾರ್ಕೇಟ್ನಿಂದ ಅಥವಾ ಕಡಿಮೆ ರೇಟಿಗೆ ಹೋಲ್ಸೇಲ್ನಲ್ಲಿ ಸಿಗುವ ಬಟ್ಟೆಗಳನ್ನು ನಾವು ಖರೀದಿಸಬಾರದಾ ಅಂತಾ ಕೇಳಿದ್ರೆ, ಖಂಡಿತವಾಗಿಯೂ ನೀವು ಬಟ್ಟೆ ಖರೀದಿಸಿ. ಆದರೆ ಅದನ್ನು ತಂದ ತಕ್ಷಣ ಧರಿಸಬೇಡಿ. ಬದಲಾಗಿ ಅದನ್ನು ಉಪ್ಪು ನೀರಿಗೆ ಹಾಕಿ, ಚೆನ್ನಾಗಿ ವಾಶ್ ಮಾಡಿ ಬಳಿಕ ಧರಿಸಿ.
ಏಕೆಂದರೆ, ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವ ಶಕ್ತಿ ಇದೆ. ಹಾಗಾಗಿ ಉಪ್ಪನ್ನು ಮನೆ ಕ್ಲೀನ್ ಮಾಡಲು, ದೃಷ್ಟಿ ತೆಗೆಯಲು, ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡಲು ಬಳಸುತ್ತಾರೆ. ಇದರಿಂದ ನಮ್ಮ ಮೇಲಿನ ದೃಷ್ಟಿ ಹೋಗುವುದಲ್ಲದೇ, ನಕಾರಾತ್ಮಕ ಶಕ್ತಿಯ ಪರಿಣಾಮವೂ ಕಡಿಮೆಯಾಗುತ್ತದೆ.
ಇನ್ನು ಕೆಲವರು ಸರೋಜ್ನಿ ಮಾರ್ಕೇಟ್ ಬಗ್ಗೆ ಹೀಗೂ ಮಾತನಾಡಿದ್ದಾರೆ. ಅಲ್ಲಿ ಸಿಗುವ ಕಡಿಮೆ ಬೆಲೆಯ ಬಟ್ಟೆಗಳನ್ನು ವಿದೇಶದಿಂದ ತರಲಾಗುತ್ತದೆಯಂತೆ. ಯಾರಾದರೂ ತೀರಿ ಹೋದರೆ, ಅವರ ಬಟ್ಟೆಗಳನ್ನೆಲ್ಲ ದಾನ ಮಾಡಲಾಗುತ್ತದೆ. ಆ ಬಟ್ಟೆಗಳನ್ನೇ ಸರೋಜ್ನಿ ಮಾರ್ಕೇಟ್ಗೆ ತಂದು ಮಾರಲಾಗುತ್ತದೆ.
ಅಂಥ ಸಮಯದಲ್ಲಿ ಸತ್ತವರ ಆತ್ಮದ ಪ್ರಭಾವ ಆ ಬಟ್ಟೆಗಳ ಮೇಲೆ ಇರುವ ಸಾಧ್ಯತೆ ಇರುತ್ತದೆ.ಆಗ ಆ ಬಟ್ಟೆ ಖರೀದಿಸಿದವರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಟ್ಟೆ ಖರೀದಿಸಿದ ಬಳಿಕ ಮನೆಗೆ ಬಂದು ಉಪ್ಪು ನೀರಿನಿಂದ ಅದನ್ನು ವಾಶ್ ಮಾಡಿ ಮತ್ತೆ ಧರಿಸಿ.




