Recipe: ಬೇಕಾಗುವ ಸಮಾಗ್ರಿ: 1 ಕಪ್ ಕ್ರೀಮ್, 1 ಕಪ್ ಹಾಲು, ಅರ್ಧ ಕಪ್ ಹಾಲಿನ ಪುಡಿ, ಅರ್ಧ ಕಪ್ ಸಕ್ಕರೆ, 1 ಕಪ್ ಮ್ಯಾಂಗೋ ಪ್ಯೂರಿ, ಸಣ್ಣಗೆ ಕತ್ತರಿಸಿದ ಮ್ಯಾಂಗೋ, 2 ಸ್ಪೂನ್ ಕೇಸರಿ ನೀರು ಅಥವಾ ಕೇಸರಿ ಹಾಲು, ಡ್ರೈಫ್ರೂಟ್ಸ್.
ಮಾಡುವ ವಿಧಾನ: ಮಿಕ್ಸಿ ಜಾಾರ್ಗೆ ಕ್ರೀಮ್, ಹಾಲು, ಹಾಲಿನ ಪುಡಿ, ಸಕ್ಕರೆ, ಮ್ಯಾಂಗೋ ಪ್ಯೂರಿ ಹಾಕಿ ರುಬ್ಬಿ. ಬಳಿಕ ಕೇಸರಿ ನೀರು ಹಾಕಿ ಮತ್ತೆ ರುಬ್ಬಿ. ನಂತರ 1 ಬಾಕ್ಸ್ನಲ್ಲಿ ಈ ಮಿಶ್ರಣ ಹಾಕಿ, ಇದಕ್ಕೆ ಕತ್ತರಿಸಿದ ಮ್ಯಾಂಗೋ ಮತ್ತು ಡ್ರೈ ಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿ. ಫ್ರೀಜರ್ನಲ್ಲಿರಿಸಿ, 8 ಗಂಟೆಯ ಬಳಿಕ ಮ್ಯಾಂಗೋ ಐಸ್ಕ್ರೀಮ್ ರೆಡಿ.




