Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್ ಹೇಳಿದ್ದಾರೆ.
ಸದಾ ಕಾಲ ಕಾಂಟ್ರವರ್ಸಿ ಮಾಡಿಕೊಳ್ಳುತ್ತ ಜೀವನ ಸಾಗಿಸುವ ರೇಖಾ, ಇದೀಗ ಸೌತ್ ಸಿನಿಮಾ ಮಂದಿ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿಜಯ್ ಮತ್ತು ತ್ರಿಷಾ ಪ್ರೀತಿಯಲ್ಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದ್ದ ವೇಳೆಯೇ, ವಿಜಯ್ ಮತ್ತು ಅವರ ಪತ್ನಿ ವಿಚ್ಛೇದನ ಪಡೆದ ವಿಷಯ ಹೊರಬಿದ್ದಿತ್ತು. ಇಷ್ಟು ಸುಂದರವಾಗಿ ಸಂಸಾರ ನಡೆಸಿದ ಕುಟುಂಬಕ್ಕೆ ಬಂದು ತ್ರಿಷಾ ಹುಳಿ ಹಿಂಡಿದರು ಎಂದು ಹಲವರು ತ್ರಿಷಾ ವಿರುದ್ಧ ಕಿಡಿಕಾರಿದ್ದರು.
ಬಳಿಕ ತ್ರಿಷಾ ಹಲವು ಬಾರಿ ವಿಜಯ್ ಜೊತೆ ಹಲವು ಕಾರ್ಯಕ್ರಮ, ಮದುವೆ ಫಂಕ್ಷನ್, ಅವಾರ್ಡ್ ಫಂಕ್ಷನ್ ಎಲ್ಲ ಕಡೆ ಜೋಡಿಯಾಗಿ ಕಾಣಿಸಿದ್ದರು. ನಂತರ ಚುನಾವಣಾ ಫಲಿತಾಂಶದ ದಿನ ವಿಜಯ್ ಗೆಲುವು ಸಾಧಿಸಲಿ ಎಂದು ಬೆಳ್ಳಂ ಬೆಳಿಗ್ಗೆಯೇ ತಿರುಪತಿಗೆ ಹೋಗಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದರು ಅಂತಾನೇ ಜನ ಮಾತನಾಡುತ್ತಿದ್ದಾರೆ.
ಇದೀಗ ತ್ರಿಷಾ ಮತ್ತು ವಿಜಯ್ ಜೋಡಿ ಚೆನ್ನಾಗಿದೆ ಅವರಿಬ್ಬರೂ ವಿವಾಹವಾಗಬೇಕು ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿಕೆ ನೀಡಿದ್ದಾರೆ. ಅವರಿಬ್ಬರ ಜೋಡಿ ಅದ್ಭುತವಾಗಿದೆ. ಅವರಿಬ್ಬರೂ ಮದುವೆಯಾಗಬೇಕು ಮತ್ತು ಅವರ ಮದುವೆ ಕಾರ್ಯಕ್ರಮಕ್ಕೆ ನಾವೆಲ್ಲರೂ ಹೋಗಬೇಕು ಎಂದಿದ್ದಾರೆ. ಅಲ್ಲದೇ, ತ್ರಿಷಾ ಮತ್ತು ನಾನು ಒಟ್ಟಿಗೆ ಚಿತ್ರರಂಗಕ್ಕೆ ಕಾಲಿಟ್ಟವರು. ಹಾಗಾಗಿ ತ್ರಿಷಾ ನನಗೆ ಚೆನ್ನಾಗಿ ಪರಿಚಯ ಎಂದು ರಾಖಿ ತಿಳಿಸಿದ್ದಾರೆ.
ಸದ್ಯ ಲವ್ ಸ್ಟೋರಿ, ಮದುವೆ, ಕಾಂಟ್ರವರ್ಸಿ ಎಲ್ಲದರ ವಿಚಾರದಿಂದ ದೂರವಾಗಿ, ಸಿಎಂ ಆಗಲು ಏನೇನು ಪ್ರಯತ್ನ ಮಾಡಬೇಕು, ಹೇಗೆ ಸಿದ್ಧತೆ ಮಾಡಬೇಕು ಎಂದು ವಿಜಯ್ ಪ್ಲಾನ್ ಮಾಡುತ್ತಿದ್ದಾರೆ.




