Mumbai: ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋನ ಪ್ರಥಮ ವಿನ್ನರ್ ಆಗಿದ್ದ ಪಂಕಜ್ ಬದೋರಿಯಾ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಪಂಕಜ್ ಸೋಶಿಯಲ್ ಮೀಡಿಯಾದಲ್ಲೂ ತುಂಬಾ ಪ್ರಸಿದ್ಧರಾಗಿದ್ದರು. ರುಚಿ ರುಚಿಯಾದ ಅಡುಗೆ ರೆಸಿಪಿ ಶೇರ್ ಮಾಡುವುದರ ಜತೆಗೆ, ಅಡುಗೆಗೆ ಸಂಬಂಧಿಸಿದ ಟಿಪ್ಸ್ ಕೂಡ ನೀಡುತ್ತಿದ್ದರು.
ಆದರೆ ಕೆಲ ದಿನಗಳ ಹಿಂದೆ ಅವರು ಫುಲ್ ಬಾಡಿ ಚೆಕಪ್ ಮಾಡಿಸಿಕ“ಳ್ಳಲು ಹೋದಾಗ, ಅವರಿಗೆ ಸ್ತನ ಕ್ಯಾನ್ಸರ್ ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಖುದ್ದು ತಾವೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿರುವ ಪಂಕಜ್, ನನ್ನ ಆರೋಗ್ಯ ಸರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಕೇಳಿದ್ದಾರೆ.
ಅಲ್ಲದೇ 45 ವರ್ಷದ ಬಳಿಕ ಎಲ್ಲರೂ ಆರೋಗ್ಯ ತಪಾಸಣೆ ಮಾಡುವುದು ಅತ್ಯಗತ್ಯ. ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದ ಹಾಗೆ ತಡೆಯುವುದು ತುಂಬ ಮುಖ್ಯ ಎಂದು ಬರೆದಿದ್ದಾರೆ. ಪಂಕಜ್ ಅಭಿಮಾನಿಗಳು ಅವರು ಬೇಗ ಗುಣಮುಖರಾಗಲೆಂದು ಹಾರೈಸಿದ್ದಾರೆ.




