Healthy Tips: ಪರ್ಫ್ಯೂಮ್ ಹಾಕೋದ್ರಿಂದಾ ಫ್ರೆಶ್ ಆಗಿರ್ತೀವಿ, ಘಮ ಘಮಿಸುತ್ತಾ ಇರ್ತೀವಿ ಅನ್ನೋದು ನಿಜ. ಆದರೆ ಕೆಲವರಿಗೆ ಈ ಪರ್ಫ್ಯೂಮ್ ಇಷ್ಟಾ ಆಗತ್ತೆ. ಇನ್ನು ಕೆಲವರಿಗೆ ಇದರ ಪರಿಮಳ ಕಂಡ್ರೆ ವಾಕರಿಕೆ ಬರತ್ತೆ. ಆದರೆ ಈ ಪರ್ಫ್ಯೂಮ್ ಬಳಸುವಾಗ ನಾವು ಎಚ್ಚರಿಕೆಯಿಂದಿರಬೇಕು. ಯಾಕಂದ್ರೆ ಪರ್ಫ್ಯೂಮ್ ತಪ್ಪಾಗಿ ಬಳಸಿದರೆ, ಅದು ನಮ್ಮ ಆರೋಗ್ಯವನ್ನೇ ಹಾಳು ಮಾಡಬಹುದು. ಹಾಗಾದ್ರೆ ತಪ್ಪಾಗಿ ಪರ್ಫ್ಯೂಮ್ ಹಾಕಿದ್ರೆ, ಯಾವ ಆರೋಗ್ಯ ಸಮಸ್ಯೆ ಬರತ್ತೆ ಅಂತಾ ತಿಳಿಯೋಣ ಬನ್ನಿ.
ಪರ್ಫ್ಯೂಮ್‌ನಲ್ಲಿರುವ ರಾಸಾಯನಿಕಗಳು ಮಹಿಳೆಯರ ದೇಹದಲ್ಲಿನ ಹಾರ್ಮೋನಿನ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಕುತ್ತಿಗೆಗೆ ಡೈರೆಕ್ಟ್ ಪರ್ಫ್ಯೂಮ್ ಹಾಕಬಾರದು ಅಂತಾ ಹೇಳಲಾಗುತ್ತದೆ. ಅದರ ಬದಲು ಬರೀ ವಸ್ತ್ರಕ್ಕೆ ಸ್ವಲ್ಪ ಪರ್ಫ್ಯೂಮ್ ಹಾಕಬಹುದು.
ಮುಂಚೆ ಎಲ್ಲಾ ಸುಗಂಧ ಭರಿತವಾದ ಮನೆಯ್ಲಲೇ ತಯಾರಿಸಿದ ಎಣ್ಣೆ ಬಳಸುತ್ತಿದ್ದರು. ಅದನ್ನು ಚರ್ಮಕ್ಕೆ ಹಚ್ಚುತ್ತಿದ್ದರು. ಆದರೆ ಈಗ ನಾವೆಲ್ಲಾ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಭರಿತವಾದ ಸುಗಂಧದ್ರವ್ಯ ಬಳಸುತ್ತೇವೆ. ಅದ ನಮ್ಮ ಚರ್ಮದ ಆರೋಗ್ಯವನ್ನೇ ಹಾಳು ಮಾಡಬಹುದು. ಹಾಗಾಗಿ ನೇರವಾಗಿ ಪರ್ಫ್ಯೂಮ್ ಚರ್ಮಕ್ಕೆ ಬಳಸುವುದು ಉತ್ತಮವಲ್ಲ.
ಅಲ್ಲದೇ, 1 ಬಾರಿ ಥೈರಾಯ್ಡ್‌ನಂಥ ಗಂಭೀರ ಸಮಸ್ಯೆ ಬಂದರೆ, ಕೂದಲು ಉದುರುವಿಕೆ, ಸುಸ್ತು, ಆಯಾಸ, ಮುಖದ ಮೇಲೆ ಕೂದಲು ಬೆಳೆಯುವುದು, ಸಂತಾನಹೀನ ಸಮಸ್ಯೆ ಇತ್ಯಾದಿ ಸಮಸ್ಯೆ ಬರುತ್ತದೆ. ಹಾಗಾಗಿ ಆರೋಗ್ಯ ಹಾಳಾಗದಂತೆ ನಮ್ಮ ಸೌಂದರ್ಯ ಕಾಪಾಡುವುದು ಮುಖ್ಯ.




