Haveri News: ಹಾವೇರಿ: ಸಂಪುಟ ವಿಸ್ತರಣೆ ಸುಳಿವಿನ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಬಿನ್ನಮತ ಸ್ಟೋಟವಾಗಿದೆ. ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ವೇಳೆ ಅವಕಾಶ ವಂಚಿತರಾಗಿದ್ದ ಶಾಸಕರಿಗೆ ಸಚಿವರಾಗುವ ಅವಕಾಶ ಸಿಗಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಮಂತ್ರಿ ಕುರ್ಚಿಗಾಗಿ ಶಾಸಕರಿಬ್ಬರ ನಡುವೆ ತೆರೆಮರೆಯಲ್ಲಿ ತೀವ್ರ ಪೈಪೋಟಿ ನಡೆದಿದೆ.
ಶಾಸಕ ಶ್ರೀನಿವಾಸ್ ಮಾನೆ – ಶಾಸಕ ಬಸವರಾಜ್ ಶಿವಣ್ಣನವರ್ ಮಧ್ಯೆ ಬಿನ್ನಮತ ಏರ್ಪಟ್ಟಿದ್ದು, ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಮತ್ತು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಶಿವಣ್ಣನವರ್ ಇಬ್ಬರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆರೋಗ್ಯ ವಿಚಾರ ಮುಂದಿಟ್ಟು ಹೈಕಮಾಂಡ್ ಬಳಿ ಮಂತ್ರಿಸ್ಥಾನದ ಲಾಬಿಗೆ ಪ್ರಯತ್ನಿಸಲಾಗುತ್ತಿದೆ ಅನ್ನೋ ಮಾತು ಕೇಳಿಬಂದಿದೆ.
ಹೀಗಾಗಿ ಶಾಸಕ ಶ್ರೀನಿವಾಸ್ ಮಾನೆ ವಿರುದ್ಧ ಶಾಸಕ ಬಸವರಾಜ್ ಶಿವಣ್ಣನವರ್ ಕಿಡಿಕಾರಿದ್ದು, ಪರೋಕ್ಷವಾಗ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಬಳಿ ಹತ್ತಿರ ಸಂಬಂಧ ಇರೋ ವ್ಯಕ್ತಿ ಒಬ್ಬನಿದ್ದಾನೆ. ಅವರು ಪ್ರಯತ್ನ ಮಾಡ್ತಿದ್ದಾರೆ, ನಾವು ಸೀನಿಯರ್ ಇದ್ದೀನಿ ನನಗೂ ಕೊಡಿ. ರಾಜಕೀಯ ಮಾಡ್ಲಿ,ಅದು ಇನ್ನೊಬ್ಬರ ಮನಸ್ಸಿಗೆ ನೋವು ಆಗಬಾರದು. ಹೈಕಮಾಂಡ್ ನಾಯಕರ ಬಳಿ ನನ್ನ ಆರೋಗ್ಯ ಸರಿಯಿಲ್ಲ ಅಂತೇಳಿದ್ದಾರಂತೆ ಎಂದು ಶಾಸಕ ಬಸವರಾಜ್ ಶಿವಣ್ಣನವರ್ ವಾಗ್ದಾಳಿ ನಡೆಸಿದ್ದಾರೆ.
ಈ ಬೆನ್ನಲ್ಲೇ ಶಾಸಕ ಶ್ರೀನಿವಾಸ್ ಮಾನೆ ಜಿಲ್ಲಾ ಅಧ್ಯಕ್ಷರಾದ ಸಂಜೀವ್ ಕುಮಾರ್ ನಿರಲಗಿಗೆ ಪತ್ರ ಬರೆದಿದ್ದು, ಈ ಹೇಳಿಕೆ ಬೆನ್ನಲ್ಲೇ ಜಿಲ್ಲಾ ಅಧ್ಯಕ್ಷರಿಗೆ ಪತ್ರ ಬರೆದ ಶಾಸಕ ಶ್ರೀನಿವಾಸ್ ಮಾನೆ. ದೆಹಲಿಯಿಂದಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವ ಕುಮಾರ್ ನಿರಲಗಿಗೆ ಪತ್ರ. ಶಾಸಕರ ಹೇಳಿಕೆಗಳ ಸತ್ಯಾಸತ್ಯತೆ ಪರಿಶೀಲಿಸಿ ಎಂದು ಕೋರಿದ್ದಾರೆ. ಅಲ್ಲದೇ, ಯಾರು, ಯಾರ ಬಗ್ಗೆ ಏನು ಹೇಳಿದ್ದಾರೆ? ಅನ್ನೋದು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.




