Uttara Kannada: ಮುಂಡಗೋಡ ಪಟ್ಟಣದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟುಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಶಾಸಕ ಶಿವರಾಮ ಹೆಬ್ಬಾರ್ ಅವರು ಕಠಿಣ ನಿಲುವು ತಾಳಿದ್ದು, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕ ಸೇವೆಯಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬವನ್ನು ಸಹಿಸದ ಅವರು, ಜನರ ಹಿತಾಸಕ್ತಿಗೆ ಆದ್ಯತೆ ನೀಡುವ ಮೂಲಕ ಜವಾಬ್ದಾರಿಯುತ ಆಡಳಿತಕ್ಕೆ ಒತ್ತು ನೀಡಿದರು. ಜನಸಾಮಾನ್ಯರ ಪರವಾಗಿ ಸದಾ ಧ್ವನಿಯಾಗಿರುವ ಅವರ ಈ ಕ್ರಮ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಮುಂಡಗೋಡ ಪಟ್ಟಣ ಪಂಚಾಯಿತಿ ಕಚೇರಿಗೆ ಶಾಸಕ ಶಿವರಾಮ ಹೆಬ್ಬಾರ ಸೋಮವಾರ ದಿಢೀರ್ ಭೇಟಿ ನೀಡಿದರು.
ನಮೂನೆ 3 ಹಾಗೂ ಖಾತಾ ಬದಲಾವಣೆ ಮಾಡಿಕೊಡುವಲ್ಲಿ ವಿಳಂಬ ಮಾಡುತ್ತಿರುವ ಕಂದಾಯ ನಿರೀಕ್ಷಕ ಮಂಜುನಾಥ ಮುಚ್ಚಂಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರಿಗೆ ವಿನಾಕಾರಣ ಅಲೆದಾಟ, ತೊಂದರೆ ನೀಡಿದರೆ ಮತ್ತು ನಡುವಳಿಕೆ ತಿದ್ದಕೊಳ್ಳದಿದ್ದರೆ 24 ಗಂಟೆಯಲ್ಲಿಯೇ ಬೇರೆಡೆ ವರ್ಗಾವಣೆ ಮಾಡಾವುದಾಗಿ ಎಚ್ಚರಿಕೆ ನೀಡಿದರು.




