Koppala News: ಕೊಪ್ಪಳ :- ರಾಜ್ಯದ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದನ್ನ ಕಡೆಗಣಿಸಿದ್ದಾರೆ ಎಂದು ಕೊಪ್ಪಳದಲ್ಲಿ ಮುಸ್ಲಿಂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.
ಕೊಪ್ಪಳದ ಮುಸ್ಲಿಂ ಸಮುದಾಯದ ಮುಖಂಡರು ಕೊಪ್ಪಳದ ಅಶೋಕ ವೃತ್ತದ ಬಳಿ ಬಿದಿಗಿಳಿದು ಹೋರಾಟ ನಡೆಸಿದ್ದು, ಈಗಾಗಲೇ ಸಚಿವರಾಗಿ ಸಾಕಷ್ಟು ಅನುಭವ ಇರುವ ಮುಸ್ಲಿಂ ಸಮುದಾಯದ ಮಾಸ್ ಲೀಡರ್ ಜಮೀರ್ ಅಹ್ಮದ್ ಖಾನ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.
ಸಚಿವ ಸಂಪುಟದಲ್ಲಿ ಜಮೀರ ಅಹ್ಮದ್ ಖಾನ್ ಉಪಮುಖ್ಯಮಂತ್ರಿ ಸ್ಥಾನ ನೀಡಿ ಮುಸ್ಲಿಂ ಸಮುದಾಯದವನ್ನ ಆದ್ಯತೆ ನೀಡುವಂತೆ ಸರ್ಕಾರದ ವಿರುದ್ಧ ಕೊಪ್ಪಳದ ಮುಸ್ಲಿಂ ಸಮುದಾಯದವರು ಒತ್ತಾಯಿಸಿದ್ದಾರೆ.
ವರದಿ :ಇಮಾಮ ಕರ್ನಾಟಕ ಟಿವಿ ಕೊಪ್ಪಳ




