Bagalakote News: ಸಾವನ್ನಪ್ಪಿದ ಮಗುವನ್ನು ಉಪ್ಪಿನಲ್ಲಿರಿಸಿ, ಕುರಾಾನ್ ಓದಿ ಬದುಕಿಸುವ ಪ್ರಯತ್ನ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಆದರೆ ದುರಾದೃಷ್ಟವಶಾತ್ ಮಗು ಬದುಕಲಿಲ್ಲ.
ಬಾಗಲಕೋಟೆಯ ನವನಗರದಲ್ಲಿ ಈ ಘಟನೆ ನಡೆದಿದ್ದು, 18 ತಿಂಗಳ ಮಗು ಅಮೀನಾ ಮೃತ ಮಗುವಾಗಿದೆ. ಈ ಮಗು ಆಚೆ ಅಂಗಳದಲ್ಲಿ ಆಡುವಾಗ ಎದುರು ಮನೆಯವರ ಸಂಪ್‌ನಲ್ಲಿ ಬಿದ್ದು, ಮೃತಪಟ್ಟಿದೆ. ಆದರೆ ಮಗುವನ್ನು ಬದುಕಿಸಬೇಕು ಎಂದು, ಶವವನ್ನು ಉಪ್ಪಿನಲ್ಲಿ ಗಂಟೆಗಟ್ಟಲೇ ಇರಿಸಿದ್ದಾರೆ. ಬಳಿಕ ಕುರಾನ್ ಓದಿದ್ದಾರೆ. ಆದರೆ ಮಗು ಮಾತ್ರ ಬದುಕಲಿಲ್ಲ.
ಬಳಿಕ ವೈದರು ಹೇಳಿದ ಮೇಲೆ ಮಗುವನ್ನು ಉಪ್ಪಿನಿಂದ ಆಚೆ ತೆರೆಯಲಾಗಿದೆ. ಸ್ಥಳಕ್ಕೆ ನವನಗರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಗುವಿನ ಅಂತ್ಯಸಂಸ್ಕಾರ ಮಾಡಲಾಗಿದೆ.




