Recipe: ಬೇಕಾಗುವ ಸಾಮಗ್ರಿ: 1 ಕಪ್ ಹುರಿದ ಶೇಂಗಾ, 1 ಕಪ್ ಹುರಿಗಡಲೆ (ಹುರಿದ ಕಪ್ಪು ಕಡಲೆ), ಬಾದಾಮಿ, ಗೇರುಬೀಜ, ಖರ್ಜೂರ, ಕುಂಬಳಕಾಯಿ ಬೀಜ, ಎಳ್ಳು, ತುರಿದ ಡ್ರೈಕೋಕೋನಟ್, ಎಲ್ಲವೂ 1 ಕಪ್ ಇರಲಿ. ಮತ್ತು ಇದನ್ನೆಲ್ಲ ನೀವು ಸಪರೇಟ್ ಆಗಿ ತುಪ್ಪದಲ್ಲಿ ಹುರಿದಿರಬೇಕು. ಸಿಹಿ ಬೇಕಾದಷ್ಟು ಬೆಲ್ಲ, ಸ್ವಲ್ಪ ಏಲಕ್ಕಿ ಪುಡಿ.
ಮಾಡುವ ವಿಧಾನ: ಹುರಿದ ಎಲ್ಲ ಸಾಗ್ರಿಗಳನ್ನು ತರಿ ತರಿಯಾಗಿ ಪುಡಿ ಮಾಡಿ, ಅದಕ್ಕೆ ಏಲಕ್ಕಿ ಪುಡಿ ಸೇರಿಸಿ. ಈಗ ಬೇಕಾದಲ್ಲಿ ದ್ರಾಕ್ಷಿ ಸೇರಿಸಿ. ಬಳಿಕ ಬೆಲ್ಲ ಪಾಕ ಬರಿಸಿ, ಈ ಪುಡಿಯನ್ನು ಮಿಕ್ಸ್ ಮಾಡಿ, ಲಡ್ಡು ಕಟ್ಟುವ ಹದಕ್ಕೆ ತನ್ನಿ. ಈ ಮಿಶ್ರಣ ಸ್ವಲ್ಪ ತಣಿದ ಬಳಿಕ, ಲಡ್ಡು ಕಟ್ಟಲು ಶುರು ಮಾಡಿ.
ಪ್ರತಿದಿನ ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುನ್ನ 1 ಲಡ್ಡುವನ್ನು ಸೇವನೆ ಮಾಡಿ. ಇದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ತೂಕ ಸರಿಯಾಗಿರುತ್ತದೆ. ಮೂಳೆ ಗಟ್ಟಿಯಾಗುತ್ತದೆ. ನೀವು ಇಲ್ಲಿ ಬೆಲ್ಲದ ಬದಲು ಬರೀ ಖರ್ಜೂರ ಮತ್ತು ಅಂಜೂರವನ್ನು ಬಳಸಿದರೂ ಉತ್ತಮ.




