ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಆಗಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನ

Health Tips: ಕೆಲವರು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದನ್ನು ನೋಡಿರುತ್ತೀರಿ. ಅಥವಾ ಹಸಿ ಬೆಳ್ಳುಳ್ಳಿ ತಿನ್ನುವುದನ್ನು ನೋಡಿರುತ್ತೀರಿ. ಅದರಲ್ಲೂ ಹಿಂದಿನ ಕಾಲದವರು ಹೆಚ್ಚಾಗಿ ಈ ಆರೋಗ್ಯ ಪದ್ಧತಿಯನ್ನು ಪಾಲಿಸುತ್ತಾರೆ. ಹಾಗಾದ್ರೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ.

ಹೃದಯದ ಆರೋಗ್ಯಕ್ಕೆ ಉತ್ತಮ ಆಹಾರ: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 2ರಿಂದ 3 ಎಸಳು ಬೆಳ್ಳುಳ್ಳಿ ಸೇವನೆ ಮಾಡಬೇಕು. ಇದರಿಂದ ನಿಮ್ಮ ಹೃದಯದ ನಾಳದಲ್ಲಿ ರಕ್ತಪರಿಚಲನೆ ಉತ್ತಮವಾಗಿ, ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.

ವಾಯು ಸಮಸ್ಯೆ ನಿವಾರಿಸುತ್ತದೆ: ಬೆಳ್ಳುಳ್ಳಿಯ ಸೇವನೆಯಿಂದ ಉದರ ಬಾಧೆ, ವಾಯು ಸಮಸ್ಯೆ ಇದ್ದಲ್ಲಿ ನಿವಾರಣೆಯಾಗುತ್ತದೆ. ಗ್ಯಾಸ್’’್ರಿಕ್ ಸಮಸ್ಯೆ ಇದ್ದವರು ಪ್ರತಿದಿನ ಬೆಳಿಗ್ಗೆ ಹಸಿ ಬೆಳ್ಳುಳ್ಳಿ ಸೇವನೆ ಮಾಡಿ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಪದೇ ಪದೇ ನಿಮಗೆ ಜ್ವರ ಬರುತ್ತಿದ್ದಲ್ಲಿ ನೀವು ಹಸಿ ಬೆಳ್ಳುಳ್ಳಿ ಸೇವನೆ ಮಾಡಬಹುದು.

ಜೀರ್ಣಕ್ರಿಯೆ ಸರಿಯಾಗಿಸಲು ಅತೀ ಉತ್ತಮ: ಬೆಳ್ಳುಳ್ಳಿಯಲ್ಲಿ ಪ್ರಿಬಯೋಟಿಕ್ ಗುಣವಿದೆ. ಇದು ತಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡುತ್ತದೆ. ಹಾಗಾಗಿ ಇದು ಯಾವುದೇ ರೀತಿಯ ಉದರ ಬಾಧೆ ಬಾರದಂತೆ ತಡೆಯುತ್ತದೆ.

ಆದರೆ ನಿಮಗೆ ಹಸಿ ಬೆಳ್ಳುಳ್ಳಿ ತಿಂದರೆ ಅಲರ್ಜಿ ಎಂದಲ್ಲಿ ವೈದ್ಯರ ಬಳಿ ಹೋಗಿ, ಈ ಬಗ್ಗೆ ಪರೀಕ್ಷಿಸುವುದು ಉತ್ತಮ.

About The Author