Spiritual: ಕೆಲವರು ಜೀವನದಲ್ಲಿ ಉದ್ಧಾರವಾಗಿಲ್ಲವೆಂದು ಇತರರ ಮೇಲೆ ದೂರು ಹಾಕುತ್ತಾರೆ. ಅವರು ಹಾಗೆ ಮಾಡಿದ್ದರಿಂದಲೇ ನಾನು ಜೀವನದಲ್ಲಿ ಮುಂಬರಲು ಸಾಧ್ಯವಾಗಿಲ್ಲ. ಉದ್ಧಾರವಾಗಲು ಸಾಧ್ಯವಾಗಿಲ್ಲ ಎಂದು ದೂರುತ್ತಾರೆ. ಆದರೆ ನಮಗಿರುವ ಕೆಲ ಅಭ್ಯಾಸಗಳೇ ನಮ್ಮ ಯಶಸ್ಸನ್ನು ತಡೆಯುತ್ತದೆ. ಹಾಗಾದ್ರೆ ಆ ಅಭ್ಯಾಸಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಸ್ವಚ್ಛತೆ ಇಲ್ಲದೇ ಬದುಕುವುದು: ನಾವಿರುವ ಜಾಗವನ್ನು ನಾವು ಸ್ವಚ್ಛವಾಗಿರಿಸಬೇಕು. ತಕ್ಕಮಟ್ಟಿಗಾದರೂ ಕ್ಲೀನ್ ಆಗಿರಿಸಬೇಕು. ಅಲ್ಲದೇ, ನಾವು ಪ್ರತಿದಿನ ಸ್ನಾನ ಮಾಡಬೇಕು. ಹಲ್ಲುಜ್ಜಬೇಕು. ಸ್ವಚ್ಛವಾದ ವಸ್ತ್ರ ಧರಿಸಬೇಕು. ಇಲ್ಲವಾದಲ್ಲಿ ಆ ಗಲೀಜಿನಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಆರೋಗ್ಯ ಹಾಳಾದಲ್ಲಿ ನಾವು ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಸುತ್ತಮುತ್ತಲಿನ ಜಾಗ ಮತ್ತು ನಮ್ಮನ್ನು ನಾವು ಸ್ವಚ್ಚವಾಗಿರಿಸಬೇಕು.
ಕಾಮಕ್ಕೆ ಹೆಚ್ಚಿನ ಮಹತ್ವ ನೀಡುವುದು: ನಮ್ಮ ಇಂದ್ರಿಯಗಳನ್ನು ನಾವು ಕಂಟ್ರೋಲಿನಲ್ಲಿರಿಸಬೇಕು. ಆಗಲೇ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಅದರಲ್ಲೂ ಕಾಮವನ್ನು ಹದ್ದುಬಸ್ತಿನಲ್ಲಿರಿಸದರೆ, ಜೀವನದಲ್ಲಿ ನಾವು ಅಭಿವೃದ್ಧಿಯಾಗಬಹುದು. ಕಾಮವೇ ಹೆಚ್ಚು ಎಂದಾದರೆ, ನೀವು ಜೀವನದಲ್ಲಿ ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ.
ಗುರಿಯೆಡೆಗೆ ಗಮನವಿಲ್ಲದಿರುವುದು: ನಾವು ಯಾವ ಕೆಲಸದಲ್ಲಿ ಯಶಸ್ಸು ಗಳಿಸಬೇಕು ಎಂದು ನಿರ್ಧರಿಸಿದ್ದೇವೋ, ಆ ಕೆಲಸದಲ್ಲಿ ನಮಗೆ ಗಮನವಿರಬೇಕು. ಅದನ್ನು ಬಿಟ್ಟು ಉಳಿದ ವಿಷಯದಲ್ಲಿ, ಅಂದರೆ ಇತರರ ವಿಷಯದಲ್ಲೇ ಹೆಚ್ಚು ಗಮನ ಹರಿಸಿದರೆ, ನಾವು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ.
ಕೋಪ ಮತ್ತು ಅಸೂಯೆ ಗುಣ: ನಮಗೆ ಮಾತು ಮಾತಿಗೆ ಕೋಪ ಬರುವಂತಿದ್ದರೆ, ಮತ್ತು ನಾವು ಇತರರ ಯಶಸ್ಸನ್ನು ಕಂಡು ಅಸೂಯೆ ಪಡುವವರಾಗಿದ್ದರೆ, ನಾವು ಸದಾಕಾಲ ಮೂಲೆಗುಂಪಾಗಿಯೇ ಉಳಿಯುತ್ತೇವೆ. ನಮ್ಮನ್ನು ಯಾರೂ ಇಷ್ಟಪಡುವುದಿಲ್ಲ. ಸಂಬಂಧ, ಸ್ನೇಹದಿಂದಿರಲು ಇಚ್ಛಿಸುವುದಿಲ್ಲ. ಹಾಗಾಗಿ ಇತರರನ್ನೂ ಬೆಂಬಲಿಸುವುದು ಮತ್ತು ತಾಳ್ಮೆಯಿಂದಿರುವ ಗುಣ ನಮ್ಮಲ್ಲಿರುವುದು ಉತ್ತಮ.




