Vidur Neeti: ಇಂಥವರ ಸ್ನೇಹ ಎಂದಿಗೂ ಬೇಡ ಎನ್ನುತ್ತಾರೆ ವಿದುರ

Vidur Neeti: ಚಾಣಕ್ಯ ನೀತಿಯಲ್ಲಿ ಯಾವ ರೀತಿ ಜೀವನದಲ್ಲಿ ಬದುಕಲು ಹೇಗಿರಬೇಕು ಎಂದು ವಿವರಿಸಲಾಗಿದೆಯೋ, ಅದೇ ರೀತಿ ವಿದುರರು ಕೂಡ ಜೀವನದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕ“ಂಡರೆ ಉತ್ತಮ ಎಂದು ಹೇಳಿದ್ದಾರೆ. ಹಾಗಾದ್ರೆ ನಾವು ಎಂಥವರ ಸ್ನೇಹ ಮಾಡಬೇಕು ಎಂದು ವಿದುರರು ಹೇಳಿದ್ದಾರೆಂದು ತಿಳಿಯೋಣ ಬನ್ನಿ.

ಕೋಪ ಇರುವವರು: ಯಾರಿಗ ಹೆಚ್ಚು ಕೋಪವಿರುತ್ತದೆಯೋ, ಅಂಥವರ ಜತೆ ಯಾರೂ ಸ್ನೇಹ- ಸಂಬಂಧ ಬೆಳೆಸಲು ಇಚ್ಛಿಸುವುದಿಲ್ಲ. ಕೋಪ ಮಾಡುವವರ ಜತೆ ಇದ್ದವರಿಗೆ ಎಂದಿಗೂ ನೆಮ್ಮದಿ ಇರಲು ಸಾಧ್ಯವಿಲ್ಲ.

ಭಂಡ ಧೈರ್ಯ ಇರುವವರು: ಭಂಡ ಧೈರ್ಯ ಇರುವವರು ತಾವು ಸಮಸ್ಯೆಗೆ ಸಿಲುಕುವುದಲ್ಲದೇ, ತಮ್ಮ ಜತೆ ಇರುವವರನ್ನೂ ಸಮಸ್ಯೆಗೆ ಸಿಲುಕಿಸುತ್ತಾರೆ. ಆ ಭಂಡ ಧೈರ್ಯ ನಿಮ್ಮ ಪ್ರಾಣ ಅಥವಾ ಇತರರ ಪ್ರಾಣ ಹೋಗುವಂತೆಯೂ ಮಾಡಬಹುದು. ಅಥವಾ ಜೀವನದಲ್ಲಿ ಮಾಡಬಾರದ ತಪ್ಪು ಮಾಡಲು ಪ್ರೇರೇಪಿಸಬಹುದು. ಹಾಗಾಗಿ ಭಂಢ ಧೈರ್ಯವಿರುವವರಿಂದ ನೀವು ದೂರವಿರುವುದು ಉತ್ತಮ.

ಅಹಂಕಾರಿಗಳು: ಅಹಂಕಾರ ಇರುವವರು ತಮ್ಮ ಜತೆಗಿದ್ದವರ ಗೌರವ ಹಾಳು ಮಾಡಲು ಕೂಡ ಹೇಸುವವರಲ್ಲ. ಅವರು ಎಲ್ಲರೆದುರು ನಿಮ್ಮನ್ನು ಕೀಳಾಗ ನೋಡಿ ನಿಮ್ಮನ್ನು ಅಗೌರವಿಸಬಹುದು. ಹಾಗಾಗಿ ಅಂಥವರ ಸಂಗ ಎಂದಿಗೂ ಮಾಡಬೇಡಿ.

ನಾಸ್ತಿಕರು: ನಾಸ್ತಿಕರು ಎಂದರೆ ದೇವರನ್ನು ನಂಬದವರು. ಯಾರೂ ದೇವರನ್ನು ನಂಬುವುದಿಲ್ಲವೋ, ಅವರಿಗೆ ಹೆದರಿಕೆ ಎನ್ನುವುದು ಇರುವುದಿಲ್ಲ. ಹೆದರಿಕೆ ಇಲ್ಲದೇ, ಧೈರ್ಯವಾಗಿರುವುದು ಉತ್ತಮ ವಿಷಯ. ಆದರೆ ಕೆಟ್ಟ ಕೆಲಸ ಮಾಡುವಾಗಲೂ ಅವರಿಗೆ ಹೆದರಿಕೆಯಾಗದಿದ್ದರೆ, ಅದು ಬಲು ಅಪಾಯಕಾರಿ. ಹಾಗಾಗಿ ಅಂಥವರ ಸ್ನೇಹ ಬೇಡ ಎಂದಿದ್ದಾರೆ ವಿದುರರು.

ಮೂರ್ಖರು: ಮೂರ್ಖರ ಜತೆ ಯಾಕೆ ಸ್ನೇಹ ಮಾಡಬಾರದು ಎಂದರೆ, ಅವರು ತಮ್ಮನ್ನು ತಾವೇ ಬುದ್ಧಿವಂತರು ಎಂದು ವಾದ ಮಾಡುತ್ತಾರೆ. ಅಲ್ಲದೇ, ಅಂಥವರ ಜತೆಗಿದ್ದರೆ, ನಾವೂ ಕೂಡ ಮೂರ್ಖರಾಗಿಯೇ ಇರುತ್ತೇವೆ. ಹಾಗಾಗಿ ನಮಗಿಂತ ಬುದ್ಧಿವಂತರ ಜತೆಗಿದ್ದರೆ, ಅವರಿಂದ ಕೆಲ ಜ್ಞಾನ ಸಂಪಾದನೆಯನ್ನಾದರೂ ನಾವು ಮಾಡಬಹುದು.

About The Author