ತಾಯಿಯಾಗುತ್ತಿರುವ ಖುಷಿಯಲ್ಲಿ ನಟಿ ಸಮಂತಾ: ದಂಪತಿಯನ್ನು ಮನೆಗೆ ಕರೆದು ಸತ್ಕರಿಸಿದ ನಟ ಚಿರಂಜೀವಿ

Tollywood: ನಟಿ ಸಮಂತಾ ತಾಯಿಯಾಗುತ್ತಿದ್ದು, ಮಾ ಇಂಟಿ ಬಂಗಾರಂ ಸಿನಿಮಾ ನಿರ್ದೇಶಕಿ ನಂದಿನಿ ಈ ವಿಷಯ ಖಚಿತಪಡಿಸಿದ್ದಾರೆ. ಆದರೆ ಸಮಂತಾ ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ.

ಆದರೆ ಮಾ ಇಂಟಿ ಬಂಗಾರಂ ಸಿನಿಮಾ ಗೆದ್ದ ಖುಷಿಯಲ್ಲಿ ನಡೆದಿದ್ದ ಪ್ರೆಸ್‌ಮೀಟ್‌ನಲ್ಲಿ ಕಾಣಿಸಿದ್ದ ಸಮಂತಾರಲ್ಲಿ ಗರ್ಭಿಣಿಯಾದ ಲಕ್ಷಣವಿತ್ತು. ಹಾಗಾಗಿ ಜನ ಅದನ್ನು ಅಂದಾಜು ಮಾಡಿದ್ದರು. ಆ ಬಗ್ಗೆ ಪ್ರಶ್ನಿಸಿದ್ದಾಗ ಉತ್ತರಿಸಿದ ನಂದಿನಿ ರೆಡ್ಡಿ, ನಮ್ಮ ಸಿನಿಮಾ ಗೆದ್ದಿದೆ. ಕೆಲವೇ ದಿನಗಳಲ್ಲಿ 40 ಕೋಟಿ ಮೀರಿ ಲಾಭ ಗಳಿಸಿದೆ. ಮತ್ತು ಇಂಥ ಶುಭ ಸಂದರ್ಭದಲ್ಲಿ ಸಮಂತಾ ತಾಯಿಯಾಗುತ್ತಿದ್ದಾರೆಂದು ನಂದಿನಿ ರೆಡ್ಡಿ ಹೇಳಿದ್ದಾರೆ.

ಇನ್ನು ನಟ ಚಿರಂಜೀವಿ ಸಮಂತಾ ದಂಪತಿಯನ್ನು ಮನೆಗೆ ಕರೆದು, ಸತ್ಕರಿಸಿದ್ದಾರೆ. ಅಲ್ಲದೇ ಮಾ ಇಂಟಿ ಬಂಗಾರಂ ಸಿನಿಮಾವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ತಮ್ಮ ಜಡೀವನದ ನೂತನ ಅಧ್ಯಾಯಕ್ಕೆ ಹೆಜ್ಜೆ ಇಡುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗೆ ನನ್ನ ವಿಶೇಷ ಶುಭಾಶಯಗಳು ಎಂದು ವಿಶ್ ಮಾಡುವಮೂಲಕ ಚಿರಂಜೀವಿ, ಸಮಂತಾ ತಾಯಿಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ.

ಈ ಹಿಂದೆ ಅಕ್ಕಿನೇನಿ ನಾಗಾರ್ಜುನ್ ಅವರ ಪುತ್ರ ನಾಗಚೈತನ್ಯ ಜತೆ ಸಮಂತಾ ವಿವಾಹವಾಗಿದ್ದರು. ಬಳಿಕ ಅವರಿಬ್ಬರಿಗೂ ಡಿವೋರ್ಸ್ ಆಗಿ, ಕಳೆದ ವರ್ಷ ಡಿಸೆಂಬರ್ 1ನೇ ತಾರೀಖಿನಂದು ಸಮಂತಾ ರಾಜ್ ನಿಧಿಮೋರು ಜತೆ ಸಪ್ತಪದಿ ತುಳಿದಿದ್ದರು. ಇದೀಗ ಸಮಂತಾ ತಾಯಿಯಾಗುತ್ತಿದ್ದು, ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

About The Author