Life Lesson: ಇಂಥ ಜನಗಳಿಂದ ದೂರವಾಗದಿದ್ದರೆ ನಿಮಗೆ ಜೀವನದಲ್ಲಿ ಎಂದಿಗೂ ನೆಮ್ಮದಿ ಸಿಗುವುದಿಲ್ಲ

Life Lesson: ಕೆಲ ವ್ಯಕ್ತಿಗಳಿಂದ ಇನ್ನು ಕೆಲವರ ಜೀವನದಲ್ಲಿ ನೆಮ್ಮದಿ ಅನ್ನೋದೇ ಇರುವುದಿಲ್ಲ. ಏಕೆಂದರೆ, ಅವರಿಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ. ಹಾಗಾಗಿ ನೀವು ದೂರವಾಗಲು ಏನೇನು ಬೇಕೋ ಅದೆಲ್ಲವನ್ನೂ ಅವರು ಮಾಡುತ್ತಾರೆ. ಅದನ್ನು ಅರ್ಥ ಮಾಡಿಕ“ಂಡು ನೀವಾಗಿಯೇ ದೂರವಾಗಬೇಕು. ಹಾಗಾಗಿ ನಿಮ್ಮ ನೆಮ್ಮದಿಗಾಗಿ ನೀವು ಎಂಥವರಿಂದ ದೂರವಿರಬೇಕು ಎಂದು ನಾಾವಿಂದು ಹೇಳಲಿದ್ದೇವೆ.

ನಿಮ್ಮ ಯೋಗತ್ಯೆಯನ್ನೇ ಮರೆಸುವವರು: ಯಾರ ಮಾತು ಕೇಳಿ ನಿಮಗೆ ಜೀವನದಲ್ಲಿ ಜಿಗುಪ್ಸೆ ಬರುತ್ತದೆಯೋ, ಯಾರ ಮಾತು ಕೇಳಿದರೆ, ಜೀವನ ನಶ್ವರ ಅಂತಾ ಅನ್ನಿಸೋಕ್ಕೆ ಶುರುವಾಗತ್ತೋ, ಯಾರ ಮಾತು ಕೇಳಿದರೆ, ನಿಮಗೆ ಯಶಸ್ಸಿನ ಹಾದಿ ಮರೆತು, ನಿಮ್ಮ ಯೋಗತ್ಯೆ ಮರೆತು ಹೋಗುತ್ತದೆಯೋ, ಅಂಥವರಿಂದ ದೂರವಿರಿ.

ನೀವೇನೇ ಹೇಳಿದರೂ ಅದರಲ್ಲಿ ತಪ್ಪು ಕಂಡುಹಿಡಿಯುವವರು: ನೀವು ನಿಮ್ಮ ಅನಿಸಿಕೆ ಹೇಳಿದಾಗ, ಅದನ್ನು ಸ್ವೀಕರಿಸಲು ಅವರೆಂದಿಗೂ ಸಿದ್ಧರಿರುವುದಿಲ್ಲ. ಅದು ವೇಸ್ಟ್ ಎನ್ನುವ ರೀತಿಯೇ ಅವರು ಪ್ರತಿಕ್ರಿಯಿಸುತ್ತಾರೆ. ಅಲ್ಲದೇ, ನೀವೇನೇ ಹೇಳಿದರೂ, ನೀವೇನೇ ಮಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವ ಕೆಲಸ ಮಾಡುತ್ತಾರೆ. ಇಂಥವರಿಂದ ನೀವು ದೂರವಿರುವುದು ಉತ್ತಮ. ಮತ್ತು ಇಂಥವರಿಗೆಲ್ಲ ನೀವೆಂದೂ ಸಲಹೆ ನೀಡಬೇಡಿ.

ಗಾಸಿಪ್ ಮಾಡುವವರು: ನಿಮ್ಮ ಜತೆ ಕುಳಿತು ಯಾರಾದರೂ ಗಾಸಿಪ್ ಮಾಡುತ್ತಿದ್ದರೆ, ಇತರರ ಬಗ್ಗೆ ಹೀಯಾಳಿಸುವುದು, ಕಹಿ ನುಡಿಗಳನ್ನಾಡುವುದು, ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳುವುದನ್ನೆಲ್ಲ ಮಾಡುತ್ತಿದ್ದರೆ, ಅಂಥವರಿಂದ ದೂರವಿರಿ. ಇಂದು ನಿಮ್ಮ ಬಳಿ ಇತರರ ಬಗ್ಗೆ ಗಾಸಿಪ್ ಮಾಡುವವರು, ನಾಳೆ ನಿಮ್ಮ ಹಿಂದೆ ನಿಮ್ಮ ಬಗ್ಗೆಯೂ ಚಾಡಿ ಹೇಳುತ್ತಾರೆ.

ಜಲಸಿಯಾಗಿ ಬೆಂಬಲಿಸುವವರು: ನಿಮ್ಮನ್ನು ಕೆಲವರು ಬೆಂಬಲಿಸುವ ಪ್ರಯತ್ನ ಮಾಡುತ್ತಾರೆ. ಆದರೆ ನಿಮಗೆ ಅವರ ಬೆಂಬಲದಲ್ಲಿ ಹೊಟ್ಟೆಕಿಚ್ಚು ಕೂಡ ಕಾಣಿಸುತ್ತದೆ. ಅಂಥವರ ಬೆಂಬಲಕ್ಕಾಗಿ ಎಂದಿಗೂ ಆಸೆ ಪಡಬೇಡಿ. ಅಂಥವರು ನಿಮ್ಮನ್ನು ಬೆಂಬಲಿಸುವಂತೆ ಮಾಡಿ, ಬಳಿಕ ನಿಮ್ಮ ಸೋಲನ್ನು ಕಂಡು ಖುಷಿ ಪಡುತ್ತಾರೆ. ಇಂಥವರಿಂದ ಆದಷ್ಟು ದೂರವಿರಿ.

ತಮ್ಮ ತಪ್ಪನ್ನು ಸ್ವೀಕರಿಸದೇ ಇರುವವರು: ಯಾರೂ ಎಂದಿಗೂ ತಮ್ಮ ತಪ್ಪನ್ನು ಸ್ವೀಕರಿಸದೇ, ತಾವೇ ಸರಿ ಎನ್ನುತ್ತಾರೋ, ಅಂಥವರ ಜತೆಗಿದ್ದರೆ, ನಿಮಗೆ ಎಂದಿಗೂ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಅವರಿಗೆ ವಾದಿಸಿದರೆ, ನಿಮ್ಮ ಮನಸ್ಸಿಗೂ ಬೇಸರವಾಗುವುದು ಖಂಡಿತ. ಹಾಗಾಗಿ ಇಂಥವರಿಂದ ದೂರವಿರಿ.

ಸಮಯ ವ್ಯರ್ಥ ಮಾಡುವವರು: ಸಮಯ ವ್ಯರ್ಥ ಮಾಡುವವರು, ನಿಮ್ಮ ಯಶಸ್ಸನ್ನೂ ಬಯಸುವುದಿಲ್ಲ. ಅವರು ನೀವೂ ಆಲಸ್ಯಭರಿತರಾಗಬೇಕು ಎಂದೇ ಬಯಸುತ್ತಾರೆ. ಅಂಥವರ ಸಹವಾಸ ಮಾಡಬೇಡಿ.

ಸುಳ್ಳು ಭರವಸೆ ನೀಡುವವರು: ನಿಮಗೆ ಯಾರಾದರೂ 1 ಬಾರಿ ಸುಳ್ಳು ಭರವಸೆ ನೀಡಿ, ಅದನ್ನು ಪೂರೈಸದೇ, ನಿಮ್ಮ ಕೆಲಸಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿ ನಿಲ್ಲದೇ, ಅಂತಿಮ ಕ್ಷಣದಲ್ಲಿ ಕೈಕ“ಡುವವರನ್ನು ಎರಡನೇಯ ಬಾರಿ ಎಂದಿಗೂ ನಂಬದಿರಿ.

About The Author