Hubli News: ರಾಜಕಾಲುವೆ ಕಾಮಗಾರಿ ವೇಳೆ ಅವಘಡ: ಮಣ್ಣು ಕುಸಿದು ಕೂಲಿ ಕಾರ್ಮಿಕ ಸಾ*ವು

Hubli News: ಹುಬ್ಬಳ್ಳಿ: ರಾಜಕಾಲುವೆ ಕಾಮಗಾರಿ ವೇಳೆ ಅವಘಡ ಸಂಭವಿಸಿದ್ದು, ಮಣ್ಣು ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಹುಬ್ಬಳ್ಳಿ ಗುಜರಾತ್ ಭವನದ ಬಳಿ ಈ ಅವಘಡ ನಡೆದಿದ್ದು, ಮಲ್ಲಪ್ಪ ಜೋಗಿನ್( 41 ) ಮೃತ ಕಾರ್ಮಿಕರಾಗಿದ್ದಾರೆ. ಮೃತ ಮಲ್ಲಪ್ಪ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಿವಾಸಿಯಾಗಿದ್ದಾರೆ.

ರಾಜಕಾಲುವೆಗೆ ಸಂಪರ್ಕ ನೀಡಲು ಒಳ ಚರಂಡಿ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿತ್ತು. ಈ ವೇಳೆ ಮಲ್ಲಪ್ಪ ಗುಂಡಿಗಿಳಿದು ಮಣ್ಣು ತೆಗೆಯಲು ಮುಂದಾಗಿದ್ದ. ಆದ್ರೆ ಮಳೆಯಿಂದ ಮಣ್ಣು ನೆನೆದಿದ್ದ ಹಿನ್ನೆಲೆ ಮಲ್ಲಪ್ಪ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಈ ಕಾಮಗಾರಿ ನಡೆಸುತ್ತಿದ್ದವರ ವಿರುದ್ಧ ಆರೋಪ ಕೇಳಿಬಂದಿದ್ದು, ಮಂಜುನಾಥ ಬೊಮ್ಮಶೆಟ್ಟಿ ಎಂಬ ಗುತ್ತಿದಾರ ಈ ಕಾಮಗಾರಿ ನಡೆಸುತ್ತಿದ್ದು, ಮುನ್ನೆಚ್ಚರಿಕೆ ವಹಿಸಿದೆ ಕಾಮಗಾರಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ.

About The Author