Health Tips: ಮಕ್ಕಳಿಗೆ ಮಸಾಜ್ ಮಾಡುವುದರಿಂದ ಆಗುವ ಪ್ರಯೋಜನಗಳೇನು..?

Health Tips: ಶಿಶುಗಳಿಂದ ಹಿಡಿದು 5 ವರ್ಷದ ಮಕ್ಕಳಿಗೆ ಬಾಡಿ ಮಸಾಜ್ ಮಾಡಿಯೇ ಬಿಸಿ ನೀರಿನ ಸ್ನಾನ ಮಾಡಿಸುತ್ತಾರೆ. ಅದರಲ್ಲೂ 3 ವರ್ಷದ ತನಕ ಪ್ರತಿದಿನ ಮಕ್ಕಳಿಗೆ ಉಗುರು ಬೆಚ್ಚಗಿನ ಎಣ್ಣೆ ಹಾಕಿ ಮಸಾಜ್ ಮಾಡಿ, ಬಳಿಕ ಸ್ನಾನ ಮಾಡಿಸುತ್ತಾರೆ. ಬಳಿಕ ವಾರಕ್ಕೆ 1 ಬಾರಿ ಎಣ್ಣೆ ಸ್ನಾನ ಮುಖ್ಯವಾಗಿರುತ್ತದೆ. ಹಾಗಾದ್ರೆ ಯಾಕೆ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಬೇಕು ಅಂತಾ ತಿಳಿಯೋಣ ಬನ್ನಿ.

ಬೆಳವಣಿಗೆಗೆ ಸಹಾಯಕ: ಶಿಶು ಜನಿಸಿದ ಬಳಿಕ ವೈದ್ಯರ ಬಳಿ ವಿಚಾರಿಸಿ, ಯಾವಾಗಿನಿಂದ ಮಸಾಜ್ ಮಾಡಬೇಕು ಎಂದು ತಿಳಿಯಿರಿ. ಅವರು ಹೇಳಿದ ದಿನದಿಂದ ಮಸಾಜ್ ಮಾಡಲು ಪ್ರಾರಂಭಿಸಿ. ಮಕ್ಕಳಿಗೆ ಎಣ್ಣೆ ಹಾಕಿ ಮಸಾಜ್ ಮಾಡಿ, ಬಳಿಕ ಉಗುರು ಬೆಚ್ಚಗಿನ ಸ್ನಾನ ಮಾಡಿಸುವುದರಿಂದ ಮಕ್ಕಳ ಬೆಳವಣಿಗೆ ಅತ್ಯುತ್ತಮವಾಗಿರುತ್ತದೆ. ಸ್ನಾಯುಗಳಿಗೆ ಶಕ್ತಿ ಸಿಗುತ್ತದೆ.

ಆರೋಗ್ಯ ಅತ್ಯುತ್ತಮವಾಗುತ್ತದೆ: ಮಗುವಿಗೆ ಮಸಾಜ್ ಮಾಡುವಾಗ, ಮಗುವಿನ ದೇಹದಿಂದ ಗ್ಯಾಸ್ ಹೋಗುತ್ತದೆ. ಮಲಮೂತ್ರ ಸಮಸ್ಯೆ ಇದ್ದಲ್ಲಿ ಆ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಮಸಾಜ್ ಮಾಡುವ ರೀತಿ ನಿಮಗೆ ತಿಳಿದಿದ್ದರೆ ಮಾತ್ರ ನೀವು ಮಸಾಜ್ ಮಾಡಬೇಕು. ಸೋಶಿಯಲ್ ಮೀಡಿಯಾವನ್ನು ನಂಬಿ ಮಸಾಜ್ ಮಾಡಲು ಹೋಗಬೇಡಿ. ಅಥವಾ ಮಸಾಜ್ ಮಾಡಲು ಬರುವ ಹಿರಿಯರ ಅಥವಾ ಕೆಲಸಗಾರರ ಸಹಾಯ ಖಂಡಿತವಾಗಿ ಪಡೆಯಿರಿ. ಏಕೆಂದರೆ ಮಗುವಿನ ದೇಹ ನಾಜೂಕಾಗಿರುತ್ತದೆ. ಮೂಳೆಗಳು ಬಲವಾಗಿರುವುದಿಲ್ಲ. ಹಾಗಾಗಿ ಶಿಶುಗಳಿಗೆ ಮಸಾಜ್ ಮಾಡುವ ಮುನ್ನ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ.

ಅಲ್ಲದೇ ಮಕ್ಕಳಿಗೆ ಆಯಾ ಸಮಯದಲ್ಲಿ ಮಸಾಜ್ ಮಾಡಬಾರದು. ಮಕ್ಕಳಿಗೆ ಜ್ವರವಿದ್ದಾಗ, ಆರೋಗ್ಯ ಸಮಸ್ಯೆ ಇದ್ದಾಗ, ಹಾಲುಣಿಸಿದ ತಕ್ಷಣ, ಜೀರ್ಣ ಸಮಸ್ಯೆ ಇದ್ದಾಗ ಹೀಗೆ ಇಂಥ ಸಮಯದಲ್ಲಿ ಮಕ್ಕಳಿಗೆ ಮಸಾಜ್ ಮಾಡಬಾರದು.

About The Author