Political News: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Political News: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಥಾಣೆಯ ಜುಪಿಟರ್ ಆಸ್ಪತ್ರೆಗೆ ಶಿಂಧೆಯವರನ್ನು ದಾಖಲಿಸಲಾಗಿದ್ದು, ಜ್ವರ ಮತ್ತು ಮೈ ಕೈ ನೋವು ಇದ್ದು, ಮುನ್ನಚ್ಚೆರಿಕೆ ಕ್ರಮವಾಗಿ ಶಿಂಧೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಚಿಕಿತ್ಸೆ ನೀಡಿರುವ ವೈದ್ಯರು, ಇದು ಸಾಮಾನ್ಯ ಜ್ವರ ಎಂದು ಹೇಳಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಏಕನಾಥ್ ಶಿಂಧೆಯವರ ರೂಟಿನ್ ಚೆಕಪ್ ಮಾಡಲಾಗಿದ್ದು, ರಕ್ತ ಪರೀಕ್ಷೆಯೂ ನಡೆಸಲಾಗಿದೆ.

ಇಂದು ಏಕನಾಥ್ ಶಿಂಧೆ ಡಿಸ್ಚಾರ್ಜ್ ಆಗಲಿದ್ದು, ವಿಶ್ರಾಂತಿ ಬಳಿಕ ಮತ್ತೆ ತಮ್ಮ ಕೆಲಸ ಮುಂದುವರಿಸಲಿದ್ದಾರೆಂಬ ಮಾಹಿತಿ ಇದೆ.

About The Author