Recipe: ಬೇಕಾಗುವ ಸಾಮಗ್ರಿ: ಸ್ವಲ್ಪ ಪನೀರ್, ಬಾಸುಮತಿ ಅಕ್ಕಿಯಿಂದ ಮಾಡಿದ ಅನ್ನ, ಅರ್ಧ ಕಪ್ ಶೇಂಗಾ, 5ರಿಂದ 6 ಬೆಳ್ಳುಳ್ಳಿ ಎಸಳು, 3 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ನಿಂಬೆರಸ, 1 ಸ್ಪೂನ್ ಜೀರಿಗೆ, 1 ಈರುಳ್ಳಿ, 1 ಕ್ಯಾಪ್ಸಿಕಂ, ಕ್ಯಾರೆಟ್, ಉಪ್ಪು, ಎಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ: ಪ್ಯಾನ್ಗೆ ಸ್ವಲ್ಪ ಎಣ್ಣೆ ಹಾಕಿ ಮಂದ ಉರಿಯಲ್ಲಿ ಶೇಂಗಾವನ್ನು ಹುರಿಯಿರಿ. ಬಳಿಕ ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಮತ್ತೆ ಹುರಿಯಿರಿ. ಮಿಶ್ರಣ ತಣ್ಣಗಾದ ಬಳಿಕ ಕೊತ್ತೊಂಬರಿ ಸೊಪ್ಪು ಸ್ವಲ್ಪ ಉಪ್ಪು, ನಿಂಬೆರಸ ಹಾಕಿ ಇದನ್ನು ತರಿ ತರಿಯಾಗಿ ರುಬ್ಬಿ.
ಮತ್ತೆ ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ಜೀರಿಗೆ, ಈರುಳ್ಳಿ ಹಾಕಿ ಹುರಿಯಿರಿ. ನಂತರ ಕ್ಯಾಪ್ಸಿಕಂ, ಕ್ಯಾರೆಟ್ ಹಾಕಿ ಮತ್ತೆ ಹುರಿಯಿರಿ. ಬಳಿಕ ಪನೀರ್ ಹಾಕಿ ಸ್ವಲ್ಪ ಬಿಸಿ ಮಾಡಿ.
ಆಮೇಲೆ ರೆಡಿ ಮಾಡಿದ್ದ ಮಸಾಲೆ, ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 5 ನಿಮಿಷ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಬೇಯಿಸಿದ್ರೆ, ಪನೀರ್ ಥೇಚ್ಚಾ ರೈಸ್ ರೆಡಿ. ಇದರ ಜತೆ ನೀವು ರಾಯ್ತಾ ಮ್ಯಾಚ್ ಮಾಡಿ ತಿನ್ನಬಹುದು.




