Financial Knowledge: ಹಣ ಮಾಡಿದವರೆಲ್ಲ, ಶ್ರೀಮಂತರಾದವರೆಲ್ಲ ಅಡ್ಡ ದಾರಿ ಹಿಡಿದೇ ಮಾಡಿದ್ದು ಅಂತಾ ಮಾತಾಡೋದೆಲ್ಲ ಹಳೆ ವಿಷಯವಾಯ್ತು. ಇದೀಗ ಎಲ್ಲವೂ ಸಕಾರಾತ್ಮಕವಾಗಿ ಯೋಚಿಸಿ, ಬುದ್ಧಿವಂತಿಕೆ ಉಪಯೋಗಿಸಿ, ಸರಿ ದಾರಿಯಲ್ಲೇ ನಡೆದು ಶ್ರೀಮಂತರಾಗುತ್ತಿದ್ದಾರೆ. ನೀವೂ ಶ್ರೀಮಂತರಾಗಬೇಕು ಎಂದು ಬಯಸಿದ್ದೀರಿ. ಆದರೆ ಸಾಧ್ಯವಾಗುತ್ತಿಲ್ಲ. ಹಾಗಾದರೆ ಇದಕ್ಕೆ ಕಾರಣವೇನು ಎಂದು ತಿಳಿಯೋಣ ಬನ್ನಿ..
ಯೋಜನೆ ರೂಪಿಸದೇ ಇರುವುದು: ನಾವು ಸಂಬಳ ಬಂದ ಬಳಿಕ ಆ ಹಣವನ್ನು ಯಾವ ರೀತಿಯಾಗಿ ಬಳಸಬೇಕು ಅನ್ನೋ ಬಗ್ಗೆ ನಾವು ಯೋಜನೆ ರೂಪಿಸುವುದೇ ಇಲ್ಲ. ಸ್ಯಾಲರಿ ಬಂದ ತಕ್ಷಣ ಖರ್ಚು ಮಾಡಲು ಶುರು ಮಾಡುತ್ತೇವೆ. ಅದೇ ನಾವು ಮಾಡುವ ತಪ್ಪು. ಹಾಗಾಗಿ ಬಂದ ಹಣದಲ್ಲಿ ಉಳಿತಾಯ, ಅವಶ್ಯಕತೆ, ಎಮರ್ಜೆನ್ಸಿ, ಖರ್ಚು ಹೀಗೆ ಯೋಜನೆ ರೂಪಿಸಬೇಕು.
ಇರುವ ಹಣದ ಬಗ್ಗೆ ಲೆಕ್ಕವಿಡದಿರುವುದು: ನಿಮ್ಮ ಬಳಿ ಎಷ್ಟು ಹಣವಿದೆ. ನಿಮ್ಮ ಹೆಸರಿನಲ್ಲಿ ಅಥವಾ ಮನೆಯವರ ಹೆಸರಿನಲ್ಲಿರುವ ಆಸ್ತಿಯ ಬಗ್ಗೆ ವಿವರ, ಭೂಮಿಯ ಬಗ್ಗೆ ಕೇಸ್ ನಡೆಯುತ್ತಿರುವುದು. ಇತ್ಯಾದಿಗಳ ಬಗ್ಗೆ ನಮಗೆ ತಿಳುವಳಿಕೆ ಇರಬೇಕು. ಇದೆಲ್ಲವೂ ತಲೆನೋವು, ಇದಕ್ಕಾಗಿ ಸರ್ಕಾರಿ ಕಚೇರಿ ಅಲೆದಾಡುವವರು ಯಾರೂ ಎಂಬ ನಿರ್ಲಕ್ಷ್ಯದಿಂದಲೇ ಹಲವರು ಬಡವರಾಗಿಯೇ ಉಳಿದಿದ್ದಾರೆ.
ಕ್ರೆಡಿಟ್ ಕಾರ್ಡ್ ಹೆಚ್ಚು ಬಳಸುವುದು: ಕ್ರೆಡಿಟ್ ಕಾರ್ಡ್ ಬಳಸುವ ರೀತಿ ತಿಳಿದಿದ್ದರೆ ಮಾತ್ರ ಅದನ್ನು ಬಳಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಅಂದ್ರೆ ತುಂಬಾ ಎಮರ್ಜೆನ್ಸಿ ಇದ್ದಾಗ ಬಳಸುವ ಸಾಧನ. ಅದನ್ನು ಎಲ್ಲ ಸಮಯದಲ್ಲೂ ಬಳಸಿದ್ರೆ, ಸಾಲ ಮತ್ತು ಬಡ್ಡಿ ಹೆಚ್ಚಾಗುತ್ತದೆ.
ಉಳಿತಾಯದ ಬುದ್ಧಿ ಇಲ್ಲದಿರುವುದು: ಮನುಷ್ಯ ಶ್ರೀಮಂತನಾಗಬೇಕು ಅಂದ್ರೆ ಬರೀ ದುಡಿದರೆ ಸಾಲದು. ಆತನಿಗೆ ಉಳಿತಾಯ ಮಾಡುವ ಬುದ್ಧಿ ಮತ್ತು ಹೂಡಿಕೆ ಮಾಡುವ ಬುದ್ಧಿವಂತಿಕೆ ಇರಲೇಬೇಕು. ಬರೀ ದುಡಿಮೆಯಿಂದ ಶ್ರೀಮಂತರಾಗಲು ಸಾಧ್ಯವಿಲ್ಲ.




