Life Lesson: ಈ ಬೇಸಿಕ್ ಮ್ಯಾನರ್ಸ್ ನಿಮ್ಮಲ್ಲಿದ್ದರೆ ನೀವು ಪ್ರಬುದ್ಧರೆಂದು ಅರ್ಥ- ಭಾಗ 1

Life Lesson: ಕೆಲವು ಬೇಸಿಕ್ ಮ್ಯಾನರ್ಸ್‌ಗಳು ಎಷ್ಟೋ ಬಾರಿ ನಮ್ಮನ್ನು ಅವಮಾನಗಳಿಂದ ಬಚಾವ್ ಮಾಡುತ್ತದೆ. ಬೇರೆಯವರ ದೃಷ್ಟಿಯಲ್ಲಿ ಕೀಳಾಗುವುದನ್ನು ತಪ್ಪಿಸುತ್ತದೆ. ಅಂಥ ಮ್ಯಾನರ್ಸ್ ಯಾವುದು ಅಂತಾ ತಿಳಿಯೋಣ ಬನ್ನಿ.

  1. ಮಾತನಾಡುವಾಗ ಅಡ್ಡ ಮಾತನಾಡುವುದು: ಯಾರಾಾದರೂ ತಮ್ಮ ಅಭಿಪ್ರಾಯ ಹೇಳುವಾಗ, ಅದನ್ನು ತಪ್ಪಿಸಿ, ನಾವು ಮಾತನಾಡುವುದು ತಪ್ಪು. ಇಂಥ ಗುಣಗಳೇ ನಮ್ಮನ್ನು ಕೀಳಾಗುವಂತೆ ಮಾಡುತ್ತದೆ.
  2. ಯಾರನ್ನೂ ಕೀಳು ಮಾಡಬೇಡಿ: ನೀವು ಎಂದಿಗೂ ಯಾರನ್ನೂ ಕೀಳು ಮಾಡಬೇಡಿ. ಅದು ಯಾರೇ ಆಗಲಿ, ಕಸ ಆರಿಸುವವರು, ಮನೆಗೆಲಸದವರು, ವೇಟರ್ ಹೀಗೆ ಯಾವ ಕೆಲಸ ಮಾಡುವವರಿದ್ದರೂ ಅಂಥವರಿಗೆ ನೀವು ಗೌರವಿಸಿದರೆ, ನಿಮ್ಮ ಗೌರವವೂ ಹೆಚ್ಚಾಗುತ್ತದೆ.
  3. ಬಸ್, ಮೆಟ್ರೋ ಇತ್ಯಾದಿ ಬಳಸುವಾಗ ಇರಲಿ ಈ ಗುಣ: ನೀವು ಬಸ್, ಮೆಟ್ರೋ , ಲಿಫ್ಟ್ ಇತ್ಯಾದಿ ಬಳಸುವಾಗ, ಅದರಲ್ಲಿದ್ದವರನ್ನು ಮೊದಲು ಹೊರಗೆ ಬರಲು ಬಿಡಿ, ಬಳಿಕ ನೀವು ಒಳಗೆ ಹೋಗಿ.
  4. ತಡವಾಗುತ್ತದೆ ಎಂದು ಹೇಳಿ: ಯಾರಾದರೂ ನಿಮ್ಮನ್ನು ಯಾವುದಾದರೂ ಕೆಲಸಕ್ಕೆ ಕರೆದಾಗ, ನಿಮಗೆ ಹೋಗಲು ತಡವಾಗುವಂತಿದ್ದರೆ, ನಾನು ಬರುವುದು ತಡವಾಗುತ್ತದೆ ಎಂದು ಹೇಳಿ. ಮತ್ತು ಆ ಸಮಯಕ್ಕೆ ಹೋಗಿ. ತಡವಾಗುತ್ತದೆ ಎಂದು ಹೇಳದೇ, ಬಂದೆ ಬಂದೆ ಎಂದು ಸುಳ್ಳು ಹೇಳಿದರೆ, ನಿಮ್ಮ ಮೇಲಿನ ಗೌರವ ಕಡಿಮೆಯಾಗುತ್ತದೆ.
  5. ಆಹಾರ ಸೇವಿಸುವಾಗ ಹೀಗೆ ಮಾಡಿ: ನಿಮ್ಮ ಜತೆ ನಾಲ್ಕು ಮಂದಿ ಆಹಾರ ಸೇವಿಸಲು ಕುಳಿತಾಗ, ಎಲ್ಲರದ್ದೂ ಊಟವಾಗಿ ಎದ್ದು ಹೋದಾಗ, ನಿಮ್ಮ ಸ್ನೇಹಿತ ಮಾತ್ರ ಊಟ ಮಾಡುತ್ತಿದ್ದರೆ, ನೀವು ಅವರಿಗೆ ಸಾಥ್ ನೀಡಬೇಕು. ಅವರ ಊಟ ಮುಗಿಯುವವರೆಗೂ ಅವರ ಜತೆಗಿರುವುದು ಉತ್ತಮ ಸ್ವಭಾವ.
  6. ಖಂಡಿತವಾಗಿಯೂ ಹೆಡ್ ಫೋನ್ ಬಳಸಿ: ನೀವು ಬಸ್, ಬಸ್‌ಸ್ಟ್ಯಾಂಡ್, ಮೆಟ್ರೋ, ಆಫೀಸ್, ಯಾರದ್ದಾದರೂ ಮನೆ ಅಥವಾ ಯಾವುದಾದರೂ ಸಾರ್ವಜನಿಕ ಸ್ಥಳ ಎಲ್ಲೇ ಇದ್ದರೂ ನೀವು ಯಾವುದಾದರೂ ವೀಡಿಯೋ ನೋಡುತ್ತಿದ್ದರೆ ಅಥವಾ ಯಾರ ಜತೆಗಾದರೂ ಮಾತನಾಡುತ್ತಿದ್ದರೆ, ಹೆಡ್ ಫೋನ್ ಬಳಸುವುದನ್ನು ಮರೆಯಬೇಡಿ. ಇದರಿಂದ ನಿಮ್ಮ ಬಗ್ಗೆ ಯಾರಿಗೂ ತಪ್ಪು ಅಭಿಪ್ರಾಯ ಬರುವುದಿಲ್ಲ.

About The Author