Life Lesson: ಭಾಗ 1ರಲ್ಲಿ ನಾವು 6 ಬೇಸಿಕ್ ಮ್ಯಾನರ್ಸ್ ಬಗ್ಗೆ ಹೇಳಿದ್ದೆವು. ಇದೀಗ ಇನ್ನುಳಿದ 5 ಬೇಸಿಕ್ ಮ್ಯಾನರ್ಸ್ ಬಗ್ಗೆ ತಿಳಿಯೋಣ.
- ಸ್ವೈಪ್ ಮಾಡಬೇಡಿ: ಯಾರಾದರೂ ನಿಮಗೆ ಯಾವುದಾದರೂ, ಫೋಟೋ, ವೀಡಿಯೋ ನೋಡೋಕ್ಕೆ ನೀಡಿದರೆ, ಅದನ್ನು ಸ್ವೈಪ್ ಮಾಡಬೇಡಿ.
- ಪರ್ಮಿಷನ್ ಇಲ್ಲದೇ ಬೇರೆಯವರ ವಸ್ತು ಬಳಸಬೇಡಿ: ನೀವು ಪಿಜಿಯಲ್ಲಿದ್ದಾಗ, ಹಾಸ್ಟೇಲ್ನಲ್ಲಿದ್ದಾಗ, ಅಥವಾ ಯಾರದ್ದಾದರೂ ಮನೆಗೆ ಹೋದಾಗ, ಅಲ್ಲಿ ಬೇರೆಯವರ ಪರ್ಮಿಷನ್ ಇಲ್ಲದೇ, ಅವರ ವಸ್ತುಗಳನ್ನು ಮುಟ್ಟಬೇಡಿ, ಬಳಸಬೇಡಿ.
- ಸಾರ್ವಜನಿಕವಾಗಿ ಯಾರನ್ನೂ ಅವಮಾನಿಸಬೇಡಿ: ನೀವು ಸಂಬಂಧಿಕರು, ಸ್ನೇಹಿತರು ಅಥವಾ ಅಪರಿಚಿತರು ಯಾರೇ ಆಗಲಿ ಸಾರ್ವಜನಿಕವಾಗಿ ಯಾರನ್ನೂ ಅವಮಾನಿಸಬೇಡಿ. ನಿಮ್ಮ ವಿಷಯದಲ್ಲಿ ಬೇರೆಯವರು ತಪ್ಪು ಮಾಡಿದ್ದರೆ, ಅವರನ್ನು ಬದಿಗೆ ಕರೆದು, ಯಾರಿಗೂ ಕೇಳದಂತೆ ಮಾತನಾಡಿ. ಅದನ್ನು ಬಿಟ್ಟು ಸಾರ್ವಜನಿಕವಾಗಿ ಯಾರನ್ನೂ ನಿಂದಿಸಬೇಡಿ.
- ಯಾರನ್ನೂ ಗುರಾಯಿಸಬೇಡಿ: ನೀವು ಬಸ್ನಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳ, ವಾಹನದಲ್ಲಿ ಹೋಗುವಾಗ, ಅಲ್ಲಿ ಯಾರಾದರೂ ಸುಂದರವಾಗಿರುವವರು ಅಥವಾ ಏನೋ ಡಿಫ್ರೆಂಟ್ ಆಗಿರುವವರು ನಿಮಗೆ ಸಿಗಬಹದು. ಆಗ ನೀವು ಅವರನ್ನು ತುಂಬ ಸಮಯ ನೋಡುವುದು, ಗುರಾಯಿಸುವುದೆಲ್ಲ ಮಾಡಬಾರದು.
- ರೂಮ್ ಪ್ರವೇಶಿಸುವ ಮುನ್ನ ನಾಕ್ ಮಾಡಿ: ನೀವು ಯಾರದ್ದಾದರೂ ರೂಮ್ ಪ್ರವೇಶಿಸುವ ಮುನ್ನ ನಾಕ್ ಮಾಡಿ, ಬರಬಹುದಾ ಎಂದು ಪರ್ಮಿಶನ್ ಕೇಳಬೇಕು.




