Karnataka Tv Special: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ 2 ತಿಂಗಳು ಕಳೆದಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಸುಮಾರು 22 ತಿಂಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಟಿವಿ ಜನರ ಮುಂದೆ ಒಂದು ವಿಶೇಷ ಅಭಿಯಾನವನ್ನು ಆರಂಭಿಸುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳು ಚುನಾವಣೆಯಲ್ಲಿ ನೀಡಿದ ಭರವಸೆಗಳು, ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನರ ಅಭಿಪ್ರಾಯವನ್ನು ದಾಖಲಿಸುವ ವಿಶೇಷ ಸರಣಿಯನ್ನು ಕರ್ನಾಟಕ ಟಿವಿ ನಡೆಸಲಿದೆ.
ಈ ವಿಶೇಷ ಸರಣಿಯ ಮೊದಲ ಸಂಚಿಕೆಯನ್ನು ಹುಬ್ಬಳ್ಳಿ–ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಸೋಮವಾರ ಆರಂಭಿಸಲಾಗುತ್ತದೆ.
ಈ ವಿಶೇಷ ಸರಣಿಯಲ್ಲಿ:
* ಚುನಾವಣಾ ಭರವಸೆಗಳು ಎಷ್ಟರ ಮಟ್ಟಿಗೆ ಈಡೇರಿವೆ?
* ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳೇನು?
* ಇನ್ನೂ ಬಾಕಿ ಉಳಿದಿರುವ ಸಮಸ್ಯೆಗಳು ಯಾವುವು?
* ಕ್ಷೇತ್ರದ ಶಾಸಕರ ಮಾತು
* ಪರಾಜಿತ ಅಭ್ಯರ್ಥಿಯ ಅಭಿಪ್ರಾಯ
* ಟಿಕೆಟ್ ಆಕಾಂಕ್ಷಿಗಳ ದೃಷ್ಟಿಕೋನ
* ಜನರ ನೇರ ಅಭಿಪ್ರಾಯ
* ದಾಖಲೆ ಹಾಗೂ ಸ್ಥಳ ಪರಿಶೀಲನೆ ಆಧಾರಿತ ವಾಸ್ತವ ಚಿತ್ರಣ
ಜನರ ಪ್ರಶ್ನೆಗಳಿಗೆ ಉತ್ತರ ಹುಡುಕುವ, ಅಭಿವೃದ್ಧಿಯ ನೈಜ ಚಿತ್ರಣವನ್ನು ನಿಮ್ಮ ಮುಂದೆ ತರುವ ಕರ್ನಾಟಕ ಟಿವಿಯ ವಿಶೇಷ ಅಭಿಯಾನ — “ನಿಮ್ಮ ಶಾಸಕರು ಹೇಳಿದ್ದೇನು? ಮಾಡಿದ್ದೇನು?”
ವರದಿಗಾರ: ಸಂಗಮೇಶ ಸತ್ತಿಗೇರಿ
ಕ್ಯಾಮೆರಾ ಪರ್ಸನ್: ಹೇಮಂತ್ ಕುಮಾರ್




