Recipe: ವೆಜ್ ಕಟ್ಲೇಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಸ್ಪೂನ್ ಎಣ್ಣೆ, ಸ್ವಲ್ಪ ಜೀರಿಗೆ, ಜಿಂಜರ್-ಗಾರ್ಲಿಕ್, ಹಸಿಮೆಣಸು. ಈರುಳ್ಳಿ, ಬೇಯಿಸಿದ ಆಲೂಗಡ್ಡೆ, ಬಟಾಣಿ, ತುರಿದ ಕ್ಯಾರೆಟ್, ಬೀಟರೂಟ್, ಕ್ಯಾಪ್ಸಿಕಂ, ಸ್ವಲ್ಪ ಹಿಂಗ್, ಅರಿಶಿನ, ಗರಂ ಮಸಾಲೆ, ಖಾರದ ಪುಡಿ, ಎಣ್ಣೆ, ಉಪ್ಪು, ಕಾರ್ನ್ ಫ್ಲೋರ್, ಬ್ರೆಡ್ ಕ್ರಂಬ್ಸ್ ಅಥವಾ ಅರಿಶಿನ.

ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಅದಕ್ಕೆ ಎಣ್ಣೆ, ಜೀರಿಗೆ, ಹಿಂಗು, ಜಿಂಜರ್‌ೃಗಾರ್ಲಿಕ್- ಹಸಿಮೆಣಸು, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಕ್ಯಾಪ್ಸಿಕಂ, ಕ್ಯಾರೇಟ್ ತುರಿ- ಬೀಟ್‌ರೂಟ್ ತುರಿ ಎರಡೂ ಹಾಕಿ ಹುರಿಯಿರಿ. ನಂತರ ಬೇಯಿಸಿದ ಬಟಾಣಿ ಮತ್ತು ಬಟಾಟೆ, ಉಪ್ಪು, ಅರಿಶಿನ, ಗರಂ ಮಸಾಲೆ, ಖಾರದ ಪುಡಿ, ಧನಿಯಾ, ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ.

ಬಳಿಕ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣ ತಣಿದ ಬಳಿಕ, ಸ್ವಲ್ಪ ನೀರಿಗೆ ಸ್ವಲ್ಪ ಕಾರ್ನ್ ಫ್ಲೋರ್ ಹಾಕಿ ಪೇಸ್ಟ್ ತಯಾರಿಸಿ. ನಂತರ ರೆಡಿ ಮಾಡಿದ ಮಿಶ್ರಣಕ್ಕೆ ಕಟ್ಲೇಟ್ ಶೇಪ್ ನೀಡಿ, ಕಾರ್ನ್ ಫ್ಲೋರ್ ಮಿಕ್ಸ್ನಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ ಹಾಕಿ ಕಾದ ಎಣ್ಣೆಯಲ್ಲಿ ಕರಿಯಿರಿ. ಅಥವಾ ತವ್ವಾ ಫ್ರೈ ಮಾಡಿದ್ರೂ ಓಕೆ. ವೆಜ್ ಕಟ್ಲೇಟ್ ರೆಡಿ.

About The Author