Haveri News: ಹಾವೇರಿಯ ಹಾನಗಲ್ ತಾಲೂಕಿನ ಆಡೂರು ಮುಖ್ಯ ರಸ್ತೆ ತಡೆದು ಜೆಡಿಎಸ್ ಮುಖಂಡ ಮತ್ತು ರೈತರು ಬಿಜೆಪಿಯ ಮುಖಂಡರು ಪ್ರತಿಭಟನೆ ನಡೆಸಿದರು.
ಇನ್ನು ಈ ಆಕ್ರೋಶಕ್ಕೆ ಕಾರಣವೇನೆಂದರೆ, ಹಾನಗಲ್ಲ ತಾಲೂಕಿನಲ್ಲಿ ನೀರಾವರಿ ಯೋಜನೆಗಳಾದ ಬಸಾಪೂರ ಮ ಆಡೂರ ಏತ ನೀರಾವರಿ, ಬಾಳಂಬೀಡ ಏತ ನೀರಾವರಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎನ್ನುವುದು. ಇದೇ ಕಾರಣಕ್ಕೆ ರೈತರು ಈ ಪ್ರತಿಭಟನೆ ಕೈಗ“ಂಡಿದ್ದಾರೆನ್ನಲಾಗಿದೆ.
ಜೆಡಿಎಸ್ ತಾಲೂಕ ಅಧ್ಯಕ್ಷ ರಾಮುನ್ ಗೌಡ ಪಾಟೀಲ್ ಮತ್ತು ರೈತ ಸಂಘ ಮತ್ತು ಬಿಜೆಪಿ ಮುಖಂಡರು ಪ್ರತಿಭಟಿಸಿದ್ದು, ತೋಟಗಾರಿಕೆ ಇಲಾಖೆಯಿಂದ ಮಾವು ಮತ್ತು ಅಡಿಕೆಗೆ ಸಮಪರ್ಕವಾಗಿ ಬೆಳೆವಿಮೆಯನ್ನು
ಕೊಟ್ಟಿರುವುದಿಲ್ಲ ಮತ್ತು ತಾವರಗೊಪ್ಪ, ವಾಸನ, ಕಲಕೇರಿ ಮಾರ್ಗವಾಗಿ ಓಡಾಡುವ ಶಾಲಾ
ವಿದ್ಯಾರ್ಥಿಗಳ್ಳಿಗೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾನಗಲ್ಲ ತಾಲೂಕಿನ ಬರಗಾಲ ಎಂದು ಘೋಷಣೆ ಮಾಡಬೇಕು ಮತ್ತು ಆಡೂರಿಗೆ ಸೂತ್ತ ಮುತ್ತಲಿನ
ಹಳ್ಳಿಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಈ ಸಮಸ್ಯೆ ಸರಿಯಾಗಿ ಅಧಿಕಾರಿಗಳು ನಿರ್ವಹಿಸದಿದ್ದರೆ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.




