Health Tips: ನೀವು ಆರೋಗ್ಯಕರ ಎಂದು ತಿಳಿದಿರುವ ಈ ಆಹಾರವನೇ ನಿಮ್ಮ ತೂಕ ಹೆಚ್ಚಿಸುತ್ತಿದೆ..!

Health Tips: ನಾವು ಆರೋಗ್ಯಕರವಾದ ಆಹಾರ ಅಂತಾ ಅದೆಷ್ಟೋ ಬಾರಿ ಅನಾರೋಗ್ಯಕರ ಆಹಾರವನ್ನೇ ಹಲವು ದಿನಗಳ ಕಾಲ ತಿಂದಿರುತ್ತೇವೆ. ಆದರೆ ಆ ಆಹಾರ ನಮ್ಮ ದೇಹಕ್ಕೆ ಸೇರಿ, ನಮ್ಮ ಆರೋಗ್ಯವನ್ನು ನಿಧಾನವಾಗಿ ಹಾಳು ಮಾಡುತ್ತ ಬರುತ್ತದೆ. ಅಂಥ ಆಹಾರಗಳ ಬಗ್ಗೆ ನಾವಿಂದು ತಿಳಿಯೋಣ.

ಸಾಮಾನ್ಯವಾಗಿ ಮಹಿಳೆಯರು ಕೂಡ ಕೆಲಸಕ್ಕೆ ಹೋಗುವ ಮನೆಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ಡ್ ಆಹಾರಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಏಕೆಂದರೆ ಅದು ಆರೋಗ್ಯಕರ ಮತ್ತು ಸುಲಭದ ಆಹಾರ ಎಂದೇ ಹಲವರು ತಿಳಿದಿರುತ್ತಾರೆ. ಆದರೆ ಪ್ಯಾಕ್ ಮಾಡಿ ಇಟ್ಟ ಆಹಾರ ಎಂದಿಗೂ ಆರೋಗ್ಯಕರವಾಗಿರುವುದಿಲ್ಲ. ಹಾಗಾಗಿ ಅದನ್ನು ಅಪರೂಪಕ್ಕೆ ನಾವು ಸೇವಿಸಬಹುದು.

ಬದಲಾಗಿ ಅದನ್ನೇ ನಮ್ಮ ದಿನನಿತ್ಯದ ಆಹಾರವೆಂದು ನಾವು ಸೇವಿಸುವಂತಿಲ್ಲ. ಕೆಲವರು ಪ್ಯಾಕ್ ಮಾಡಿ ಮಾರುವ ಗೋಧಿ, ಓಟ್ಸ್ ಬಿಸ್ಕೇಟ್‌ಗಳನ್ನೇ ಆರೋಗ್ಯಕರ ಎಂದು ಭಾವಿಸುತ್ತಾರೆ. ಆದರೆ ಇದರ ಸೇವನೆಯಿಂದಲೇ ನಿಮ್ಮ ದೇಹದ ಕೆಟ್ಟ ಕೋಲೆಸ್ಟ್ರಾಲ್ ಹೆಚ್ಚುವುದು.

ಅಲ್ಲದೇ, ಬಾಳೆಕಾಯಿ ಚಿಪ್ಸ್, ಕರಿದ ಶೇಂಗಾ ಕೂಡ ಹೆಲ್ದಿ ಅಂತಾ ನೀವು ತಿಳಿದಿರಬಹುದು. ಆದರೆ ಇದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿರ್ತಾರೆ. ಅಲ್ಲದೇ, ಚೆನ್ನಾಗಿ ಉಪ್ಪು ಮಿಕ್ಸ್ ಮಾಡಿರ್ತಾರೆ. ಹಾಗಾಗಿ ಇದು ನಿಮ್ಮ ತೂಕವನ್ನು ಅನಾರೋಗ್ಯಕರ ರೀತಿಯಿಂದ ಹೆಚ್ಚಿಸಬಹುದು.

ಇದೇ ರೀತಿ ಫ್ರೈಯ್ಡ್ ಮಖಾನಾ, ಡ್ರೈಫ್ರೂಟ್ಸ್, ಫ್ಲೇವರ್ಡ್ ಕರ್ಡ್ ಕೂಡ ನೀವು ತಿನ್ನುತ್ತೀರಿ. ಇದೆಲ್ಲವೂ ಹೆಸರಿಗಷ್ಟೇ ಹೆಲ್ದಿ. ಆದರೆ ಇದರಿಂದ ಬರೀ 10 ಪರ್ಸೆಂಟ್ ಅಷ್ಟೇ ನಿಮಗೆ ಆರೋಗ್ಯ ಸಿಗಬಹುದು. ಉಳಿದ 90 ಪರ್ಸೆಂಟ್ ಅನಾರೋಗ್ಯ ಹೆಚ್ಚಿಸುವ ಅಂಶವೇ ಸಿಗುತ್ತದೆ.

About The Author