Sandalwood: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ನಾಳೆ ರಿಲೀಸ್ ಆಗಲಿದೆ. ಹಾಗಾಗಿ ಮೂವಿ ರಿಲೀಸ್‌ಗೂ ಮುನ್ನ ಯಶ್ ಧರ್ಮಸ್ಥಳಕ್ಕೆ ಬಂದು ಶ್ರೀ ಮಂಜುನಾಥನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಕೆಜಿಎಫ್-2 2022ರಲ್ಲಿ ರಿಲೀಸ್ ಆಗಿತ್ತು, ಇದೀಗ 4 ವರ್ಷದ ಬಳಿಕ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಪ್ರಿಬುಕಿಂಗ್‌ನಲ್ಲಿ ಕೋಟಿ ಕೋಟಿ ಬಾಚಿರುವ ಟಾಕ್ಸಿಕ್ ಸಿನಿಮಾ, ಎಲ್ಲಾ ಥಿಯೇಟರ್‌ನಲ್ಲಿ ಹೌಸ್ ಫುಲ್ ಆಗಿದೆ.
ಮುಂದೆಯೂ ಕೂಡ ಇದೇ ರೀತಿ ಯಶಸ್ಸು ಗಳಿಸಲು ಎಂದು ಪ್ರಾರ್ಥಿಸಲು ಯಶ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಶ್ರೀ ಮಂಜುನಾಥನ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನಿರ್ಮಾಪಕ ವೆಂಕಟ್ ಅವರು ಮತ್ತು ಯಶ್ ಬೆಂಬಲಿಗರು ಈ ವೇಳೆ ಸಾಥ್ ನೀಡಿದ್ದರು.
ಇದಾದ ಬಳಿಕ ಯಶ್ ಉಜಿರೆಯ ಸೂರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಅಂದ್ರೆ ಕೆಜಿಎಫ್ ರಿಲೀಸ್ ವೇಳೆಯಲ್ಲೂ ಯಶ್ ರಾಧಿಕಾ ಜತೆಗೆ ಧರ್ಮಸ್ಥಳ ಮತ್ತು ಉಜಿರೆಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು.
