Spiritual: ಜನ ಶ್ರೀಕೃಷ್ಣನ ಮೇಲಿನ ಭಕ್ತಿಯಿಂದ ಜನ ವೃಂದಾವನಕ್ಕೆ ಹೋಗುತ್ತಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಬರುವ ರೀಲ್ಸ್ ನೋಡಿ, ಜನ ದರ್ಶನಕ್ಕಾಗಿ ಹೋಗುತ್ತಾರೆ. ಆದರೆ ಅಲ್ಲಿನ ಸತ್ಯವೇ ಬೇರೆ. ದೇವಸ್ಥಾನದಲ್ಲಿ ನೀವು ದೇವರ ದರ್ಶನ ಮಾಡುವಾಗ ಖಂಡಿತವಾಗಿಯೂ ನಿಮಗೆ ಖುಷಿ ಸಿಗಬಹುದು. ಆದರೆ ದೇವಸ್ಥಾನದ ಆಚೆ ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ.
ಯಾವ ಸೋಶಿಯಲ್ ಮೀಡಿಯಾದಲ್ಲಿ ವೃಂದಾವನದ ಉತ್ತಮ ಅನುಭವವನ್ನು ಮಾತ್ರ ಶೇರ್ ಮಾಡುತ್ತಾರೋ, ಅದೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ವೃಂದಾವನದ ಸತ್ಯವನ್ನೂ ಬಯಲು ಮಾಡಿದ್ದಾರೆ. ಓರ್ವ ಯುವತಿ ಈ ಬಗ್ಗೆ ಎಚ್ಚರಿಸಿದ್ದು, ವೃಂದಾವನಕ್ಕೆ ಬಂದಾಗ, ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಹಲವರು ಕಾಯುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಈಕೆ ತನ್ನ ತಾಯಿಯ ಜತೆ ವೃಂದಾವನಕ್ಕೆ ಹೋಗಿದ್ದು, ದೇವರ ದರ್ಶನ ಮಾಡುವಾಗ ಆಕೆ ಖುಷಿಯಾಗಿಯೇ ಇದ್ದಳು. ಆದರೆ ಆಚೆ ಬಂದು ದೇವಸ್ಥಾನದ ಬೀದಿಯಲ್ಲಿ ಸುತ್ತಾಡುವಾಗ, 1 ಮಂಗ ಬಂದು ಆಕೆಯ ತಾಯಿಯ ಕನ್ನಡಕ ತೆಗೆದುಕ“ಂಡು ಓಡಿದೆ. ಮತ್ತು ಆ ಯುವತಿ ಆ ಮಂಗದ ಹಿಂದೆ ಹೋದಾಗ, ಅದು ಚೆನ್ನಾಗಿ ತರಬೇತಿ ಪಡೆದ ಮಂಗವಾಗಿದ್ದು, ಬರುವ ಭಕ್ತರ ಸೆಲ್ ಫೋನ್, ಪರ್ಸ್, ಕನ್ನಡಕ, ಹೀಗೆ ಬೆಲೆ ಬಾಳುವ ವಸ್ತುಗಳನ್ನು ಕದ್ದು ತರುವ ರೀತಿ ಅವುಗಳನ್ನು ಇಲ್ಲಿನ ಜನ ತರಬೇತಿ ನೀಡಿರುತ್ತಾರೆ.
ಆ ವಸ್ತುಗಳನ್ನು ಮರಳಿ ಪಡೆಯಲು ನಾವು ಆ ಜನರ ಬಳಿ ಹೋದಾಗ, ನಿಮ್ಮ ವಸ್ತು ಬೇಕೆಂದಲ್ಲಿ 500 ರೂಪಾಯಿ ನೀಡಿ ಎಂದು ಕೇಳುತ್ತಾರೆ. ಈ ರೀತಿಯಾಗಿ ಅಲ್ಲಿ ಬರುವ ಭಕ್ತಾದಿಗಳಿಗೆ ಮೋಸ ಮಾಡಲಾಗುತ್ತದೆ. ಇನ್ನು ಆಯಾ ಪುಣ್ಯ ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯ ತಿಲಕಗಳನ್ನು ಹಚ್ಚಲಾಗುತ್ತದೆ. ವೃಂದಾವನದಲ್ಲಿ ನೀವೇ ತಿಲಕ ಧರಿಸಿ ಹೋದರೆ ಉತ್ತಮ.
ಏಕೆಂದರೆ ಅಲ್ಲಿ ತಿಲಕ ಹಚ್ಚುವವರು ತಿಲಕ ಹಚ್ಚುವ ಮುನ್ನ ನಿಮಗೆ ತೋಚಿದ್ದು ನೀಡಿ ಎನ್ನುತ್ತಾರೆ. ನೀವು ಹಣ ನೀಡಿದ ಬಳಿಕ ಅದನ್ನು ನಿಮ್ಮ ಬಳಿ ಬಿಸಾಡಿ, ಇನ್ನೂ ಹೆಚ್ಚು ಹಣ ನೀಡಿ ಎಂದು ರೂಡ್ ಆಗಿ ಮಾತನಾಡುತ್ತಾರೆಂದು ಯುವತಿ ಬೇಸರ ವ್ಯಕ್ತಪಡಿಸಿದ್ದಾಳೆ.
ಅಲ್ಲದೇ, ಹೆಚ್ಚಿನ ಜನ ವೃಂದಾವನದಲ್ಲಿ ವಿಐಪಿ ಟ್ರೀಟ್‌ಮೆಂಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಐಪಿಗಳು ಬಂದರೆ ಅವರನ್ನು ಮುಂದೆ ಬಿಡಲಾಗುತ್ತದೆ. ಅವರಿಗೆ ದೇವರಿಗೆ ಅರ್ಪಿಸಿದ ವಸ್ತ್ರ,ಹೂವು, ಪ್ರಸಾದ ಎಲ್ಲವನ್ನೂ ನೀಡಲಾಗುತ್ತದೆ. ಆದರೆ ಸಾಮಾನ್ಯ ಜನರಿಗೆ ಈ ಪ್ರಸಾದ ಸಿಗುವುದು ದೂರದ ಮಾತು ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಸಾಮಾನ್ಯರು ಬರೀ ದೇವರ ದರ್ಶನದ ನಿರೀಕ್ಷೆ ಇರಿಸಿ ಹೋಗುವುದು ಉತ್ತಮ. ಪ್ರಸಾದಕ್ಕಾಗಿ ನಿರೀಕ್ಷಿಸಿದರೆ, ನಿರಾಸೆಯಾಗುವುದು ಖಚಿತ.




