Movie review: ಅತಿಯಾಸೆ ಮಾಡಿ ಪಾಠ ಕಲಿತ ಮಿಡಲ್ ಕ್ಲಾಸ್ ಭಕ್ತನ ಕಥೆ: ಮಿಸ್ಟರ್ ಮಿಡಲ್ ಕ್ಲಾಸ್

Movie review: ಮಿಸ್ಟರ್ ಮಿಡಲ್ ಕ್ಲಾಸ್.. ಮಿಡಲ್ ಕ್ಲಾಸ್ ಹಣೆಬರಹವೇ ಅಷ್ಟು. ಸಾಲವೆಲ್ಲ ಮುಗಿದು ಸ್ವಲ್ಪ ಹಣ ಉಳಿಸೋಣ ಅಂದ್ರೆ , ಖರ್ಚಿಗೆ ದಾರಿ ಬಂದೇಬಿಡತ್ತೆ. ಅದೇ ರೀತಿ ಈ ಮಿಸ್ಟರ್ ಮಿಡಲ್ ಕ್ಲಾಸ್ ಪರಿಸ್ಥಿತಿ. ಸಾಲ ತೀರಿಸೋಕ್ಕಾದ್ರೂ ಸ್ವಲ್ಪ ಹಣ ಉಳಿಸೋಕ್ಕೂ ಪರದಾಡುವವನೇ ವೆಂಕಟೇಶನ ಪರಮ ಭಕ್ತ ವೆಂಕಟರಮಣ.

ಆದರೆ ಈ ಹಣದ ಸಮಸ್ಯೆ ಎಲ್ಲಿಯವರೆಗೆ ಹೋಗುತ್ತದೆ ಎಂದರೆ, ಮನೆ ಮರ್ಯಾದೆ ಹೋಗುವವರೆಗೆ. ಹೆಂಡ್ತಿಯನ್ನ ವಿಲನ್‌ಗಳು ಕೆಟ್ಟ ದೃಷ್ಟಿಯಿಂದ ನೋಡುವವರೆಗೆ. ಹೆಂಡತಿ ತನ್ನ ನಾದಿನಿಯ ಹೆರಿಗಾಗಿ ಕಳ್ಳತನ ಮಾಡುವವರೆಗೆ ಮನೆ ಪರಿಸ್ಥಿತಿ ಹಾಳಾಗುತ್ತದೆ.

ಇದನ್ನೆಲ್ಲ ನೋಡಿದ ಮಿಸ್ಟರ್ ಮಿಡಲ್ ಕ್ಲಾಸ್ ವೆಂಕಟರಮಣ ತಿಮ್ಮಪ್ಪನನ್ನು ಪೂಜಿಸುವುದನ್ನೇ ಬಿಟ್ಟುಬಿಡುತ್ತಾನೆ. ಆದರೆ ಇವನು ದೇವ್ರನ್ನ ಬಿಟ್ರೂ ತಿರುಪತಿ ತಿಮ್ಮಪ್ಪ ಮಾತ್ರ ಇವನನ್ನ ಬಿಡಲ್ಲ. ಮರುದಿನವೇ, ತಿಮ್ಮಪ್ಪನ ದೇವಸ್ಥಾನದಲ್ಲಿ ವಾಚಮನ್‌ ಕೆಲಸ ಸಿಗುತ್ತದೆ. ಆದರೂ ತಿಮ್ಮಪ್ಪನ ಮೇಲಿನ ಕೋಪ ಹೋಗೋದಿಲ್ಲ.

ಆಗ ಸ್ವತಃ ತಿರುಪತಿ ತಿಮ್ಮಪ್ಪನೇ ಪ್ರತ್ಯಕ್ಷವಾಗಿ ವೆಂಕಟರಮಣನ ಜೀವನವನ್ನೇ ಬದಲಾಯಿಸುತ್ತಾನೆ. ವೆಂಕಟರಮಣನ ಜೀವನ ಯಾವ ರೀತಿಯಾಗಿ ಬದಲಾಗುತ್ತದೆ ಅನ್ನೋದೇ ಈ ಸಿನಿಮಾದ ಕಥೆ.

ಅಲ್ಲದೇ ಅತೀಯಾಸೆಯಿಂದ ಜೀವನದಲ್ಲಿ ಏನೇನಾಗಬಹುದು ಎನ್ನುವ ಪಾಟ ಕಲಿಸುವ ಸಿನಿಮಾ ಇದು. ಹ“ಡೆದಾಟ- ಬಡಿದಾಟವಿಲ್ಲದೇ, ಮುಜುಗರವಾಗುವಂಥ ಸೀನ್ ಇಲ್ಲದೇ, ಕಾಲ್ಪನಿಕ ಕಥೆಗಳನ್ನು ಇಷ್ಟಪಡೋರಿಗೆ ಈ ಸಿನಿಮಾ ಕೂಡ ಇಷ್ಟವಾಗುತ್ತದೆ.

ನಾಗೇಶ್ವರ ರೆಡ್ಡಿ ನಿರ್ದೇಶನದ ಈ ಸಿನಿಮಾದಲ್ಲಿ ಮೇಕಾ ಶ್ರೀಕಾಂತ್ ಭಕ್ತ ವೆಂಕಟರಮಣನ ಪಾತ್ರ ನಿರ್ವಹಿಸಿದ್ದಾರೆ. ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಲಭ್ಯವಿದೆ.

About The Author