Ott Movie Review: ಕನ್ನಡದಲ್ಲಿ 1 ಅರ್ಥಪೂರ್ಣ ಸಿನಿಮಾ ”ಮರ್ಯಾದೆ ಪ್ರಶ್ನೆ”

Sandalwood: ಮರ್ಯಾದೆ ಪ್ರಶ್ನೆ.. ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿರುವ ಸಿನಿಮಾ. 2024ರಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮಧ್ಯಮ ವರ್ಗದವರು ಜೀವನ ನಡೆಸುವ ರೀತಿ,  ಸಂಬಂಧದಲ್ಲಿರುವ ಪ್ರೀತಿ, ಕಾಳಜಿ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆ ಇರುವ ಬಾಂಧವ್ಯ. ಇದೆಲ್ಲವನ್ನೂ ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.

ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗೆಳೆಯನಿಗೆ ರಾಜಕೀಯದಲ್ಲಿ ಹೆಸರು ಮಾಡಬೇಕೆಂಬ ಹುರುಪಿರುವ ಗೆಳೆಯ ಯಾವ ರೀತಿಯಾಗಿ ಸಹಾಯ ಮಾಡುತ್ತಾನೆ..? ಹಣವಂತರು ಬಡವರ ಮೇಲೆ ಮಾಡುವ ದೌರ್ಜನ್ಯ, ಮಧ್ಯಮ ವರ್ಗದವರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಈ ಮಧ್ಯೆ ಅಣ್ಣ-ತಂಗಿ ಬಾಂಧವ್ಯ. ಮಕ್ಕಳಿಂದ ಪ್ರೀತಿ-ಕಾಳಜಿ ಬಿಟ್ಟು ಬೇರೇನನ್ನೂ ನೀರಿಕ್ಷಿಸದ ತಂದೆ ತಾಯಿಯ ಪ್ರೀತಿ ನಿಮಗೆ ಕಣ್ಣೀರು ತರಿಸೋದಂತೂ ಖಂಡಿತ. ಇನ್ನು ಅಣ್ಣನ ಗೆಳೆಯನ ಜತೆ ಪ್ರೀತಿಯಲ್ಲಿ ಬಿದ್ದ ತಂಗಿಯ ನಟನೆ ನಿಮ್ಮ ಮನಸ್ಸಿಗೆ ಮುದ ನೀಡುವುದೂ ಖಚಿತ. ಈ ಸಿನಿಮಾದಲ್ಲಿ ಸ್ನೇಹದ ಬೆಲೆ ತೋರಿಸಲಾಗಿದೆ. ಅದನ್ನು ನೋಡಿ ನಿಮಗೆ ನಿಮ್ಮ ಗೆಳೆಯರ ನೆನಪು ಬಂದೇ ಬರುತ್ತದೆ.

ಈ ಸಿನಿಮಾದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ನಾಗೇಂದ್ರ ಶಾ, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಪ್ರಭು ಮಂಡ್ಕೂರು, ರೇಖಾ ಕೂಡ್ಲಿಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕ“ಂಡಿದ್ದಾರೆ.

ನಾಗರಾಜ್ ಸೋಮಯಾಜಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಆರ್‌ಜೆ ಪ್ರದೀಪ ಸಿನಿಮಾ ನಿರ್ಮಾಣ ಮಾಡಿದ್ದಾರೆ.

About The Author