Bollywood: ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗುವ ಪ್ರಸಿದ್ಧ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಓರ್ವ ಉದ್ಯಮಿ ಭಾಗವಹಿಸಿ, 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಅದೇ ಹಣದಿಂದ ತಮ್ಮ ಪೂರ್ತಿ ಸಾಲ ತೀರಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯ ಉದ್ಯಮಿಯಾಗಿರುವ ಸಲೀಂ ಮೇಸ್ತ್ರಿ ಎಂಬುವವರು ಚಿಪ್ಸ್ ಮತ್ತು ವೇಫರ್ಸ್ ಬ್ಯುಸಿನೆಸ್ ಮಾಡುತ್ತಿದ್ದರು. ಆದರೆ ವ್ಯಾಪಾರ ಸರಿಯಾಗಿ ಆಗದೇ, ಸಾಲದ ಸುಳಿಯಲ್ಲಿ ಸಿಲುಕಿ, ಸರಿಯಾಗಿ ಉದ್ಯಮ ನಡೆಸಲಾಗದೇ ಕಂಗಾಲಾಗಿದ್ದರು. ಅಲ್ಲದೇ ಇವರ ಪತ್ನಿಗೆ ಗಂಭೀರ ಖಾಯಿಲೆ ಇದ್ದು, ಅದರ ಖರ್ಚು ವೆಚ್ಚಗಳು ಹೆಚ್ಚಾಗಿದ್ದವು.
ಅಲ್ಲದೇ ಖರ್ಚು-ವೆಚ್ಚ, ಸಾಲ ಎಲ್ಲ ಸಮಸ್ಯೆಗಳು 1 ಬಾರಿಗೆ ಬಂದಿದ್ದರಿಂದ ಅವರು ತಮ್ಮ ಸ್ವಂತ ಮನೆ ಮಾರಬೇಕಾಗಿ ಬಂತು. ಬಳಿಕ ಪರಿಸ್ಥಿತಿ ಸುಧಾರಿಸಲು ಕ್ಯಾಂಟೀನ್ ಓಪನ್ ಮಾಡಿದರು. ಆದರೆ ಅದು ಕೂಡ ಸರಿಯಾಗಿ ಕೆಲಸ ಮಾಡಲಿಲ್ಲ. ಲಾಭ ತರಲಿಲ್ಲ.
ಈ ವೇಳೆ ಅವರಿಗೆ ಸಾಲ ತೀರಿಸಲು, ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ತೋರಿದ ಸರಿಯಾದ ದಾರಿ ಅಂದ್ರೆ ಅದು, ಕೌನ್ ಬನೇಗಾ ಕರೋಡ್‌ಪತಿ ಶೋ. ಈ ಶೋಗೆ ಬಂದ ಸಲೀಂ, ಬುದ್ಧಿವಂತಿಕೆಯಿಂದ ಆಡಿ 25 ಲಕ್ಷ ರೂಪಾಯಿ ಗೆದ್ದಿದ್ದಾರೆ. 50 ಲಕ್ಷದ ಪ್ರಶ್ನೆಗೆ ಸರಿಯಾಗಿ ಉತ್ತರ ತಿಳಿಯದ ಕಾರಣ ಆಟವನ್ನು ಕ್ವಿಟ್ ಮಾಡುವ ನಿರ್ಧಾರ ಮಾಡಿದ್ದರು. ಹಾಗಾಗಿ ಅವರಿಗೆ 25 ಲಕ್ಷ ರೂಪಾಯಿ ಸಿಕ್ಕಿದೆ.
ಆದರೆ ಅವರು ಗೆದ್ದಿದ್ದು 25 ಲಕ್ಷ ರೂಪಾಯಿಯಾದರೂ, ಟ್ಯಾಕ್ಸ್ ಎಲ್ಲವೂ ಕಟ್ ಆಗಿ, ಅವರ ಕೈಗೆ 20 ಲಕ್ಷ ಹಣ ಸಿಗಬಹುದು. ಇರುವ 14 ಲಕ್ಷ ಸಾಲವನ್ನು ತೀರಿಸಿ, ಅವರು ತಮ್ಮ ಜೀವನದ ಸಮಸ್ಯೆಗಳಿಂದ ಈ ಹಣದಿಂದ ಪರಿಹಾರ ಕಂಡುಕ“ಳ್ಳಬಹುದು ಎನ್ನುವುದು ಸಲೀಂ ಅವರ ಮಾತು.




