ವಂದೇ ಮಾತರಂ ಗೀತೆ ಬಗ್ಗೆ ತಂಗಡಗಿ ಗರಂ ವಿಚಾರ: ಕಾಂಗ್ರೆಸ್ ನಡೆಯನ್ನು ಬ್ರಿಟೀಷರಿಗೆ ಹೋಲಿಸಿದ ಸಿ.ಟಿ.ರವಿ

Political News: ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರು ಹೇಳಿದರೆಂಬ ಕಾರಣಕ್ಕೆ ವಂದೇ ಮಾತರಂ ಎರಡು ಚರಣಗಳನ್ನು ಮಾತ್ರ ಹಾಡದೇ ಪೂರ್ತಿ ಹಾಡಿರುವುದಕ್ಕೆ ಸಚಿವ ತಂಗಡಗಿ ಅಧಿಕಾರಿಯನ್ನು ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ವಂದೇ ಮಾತರಂ 2 ಚರಣ ಮಾತ್ರ ಹಾಡಬೇಕು ಎನ್ನುವ ನಿಯಮವಿದೆ ಬಿಜೆಪಿ ನಾಯಕರಿಗಾಗಿ, ರಾಜ್ಯದ ಆದೇಶವನ್ನು ಮೀರಿ ವಂದೇ ಮಾತರಂ ಹಾಡನ್ನ ಪೂರ್ತಿಯಾಗಿ ಹಾಡಿದರೆ, ಕ್ರಮ ಕೈಗ“ಳ್ಳಬೇಕಾಗುತ್ತದೆ ಎಂದು ನಿನ್ನೆ ತಂಗಡಗಿ ಎಚ್ಚರಿಕೆ ನೀಡಿದ್ದರು.

ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಂದೇ ಮಾತರಂ ಪೂರ್ಣವಾಗಿ ಹಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿರುವುದು ಬ್ರಿಟಿಷರಲ್ಲ, ಕಾಂಗ್ರೆಸ್ ಸರ್ಕಾರದ ಸಚಿವರು! ಒಂದು ಕಾಲದಲ್ಲಿ, ವಂದೇ ಮಾತರಂ ಹಾಡಿದರೆ ಬ್ರಿಟಿಷರು ಸಹಿಸದೆ, ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರವಾಗಿ ಶಿಕ್ಷಿಸುತ್ತಿದ್ದರು. ಆದರೆ, ವಂದೇ ಮಾತರಂ ಗೀತೆ ದಿನೇ ದಿನೇ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚುತ್ತಲೇ ಇತ್ತು. ಬ್ರಿಟಿಷರು ತೆರಳಿದರೂ, ವಂದೇ ಮಾತರಂ ಭಾರತದ ಅಸ್ಮಿತೆಯಾಗಿ ಮುಂದುವರಿದಿದೆ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ, ಯಾವ ಗೀತೆ ಸಮಸ್ತ ಭಾರತವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಪ್ರೇರೇಪಿಸಿತ್ತೋ, ಆ ಗೀತೆಯನ್ನು ಒಂದು ಕೋಮನ್ನು ಮೆಚ್ಚಿಸುವ ಸಲುವಾಗಿ ಇಂದು ಕಾಂಗ್ರೆಸ್ ದ್ವೇಷಿಸುತ್ತಿದೆ. ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ, ಅದರ ಎಲ್ಲ ಚರಣಗಳನ್ನು ಹಾಡಬೇಕು ಎಂದು ಕೇಂದ್ರ ಸರ್ಕಾರ ನಿಯಮ ಜಾರಿಗೊಳಿಸಿತ್ತು. ಆದರೆ, ರಾಜ್ಯದಲ್ಲಿ ಮಾತ್ರ ದೇಶ ವಿರೋಧಿ ಕಾಂಗ್ರೆಸ್ ಪಕ್ಷ ವಂದೇ ಮಾತರಂಗೆ ಮತ್ತೆ ಕತ್ತರಿ ಹಾಕಲು ಮುಂದಾಗಿದೆ.

ಹೇಗೆ ಬ್ರಿಟಿಷರು ತಡೆದಷ್ಟೂ ವಂದೇ ಮಾತರಂ ಇನ್ನಷ್ಟು ಬಲವಾಗಿ ಮೊಳಗಿತೋ, ಹಾಗೇ ಕಾಂಗ್ರೆಸ್ ವಿರೋಧಿಸಿದಷ್ಟೂ ನಾವು ಗಟ್ಟಿಯಾಗಿ ವಂದೇ ಮಾತರಂ ಹಾಡಲಿದ್ದೇವೆ, ಭಾರತಾಂಬೆಯ ಗುಣಗಾನ ಮಾಡಲಿದ್ದೇವೆ ಎಂದು ರವಿ ಕಾಂಗ್ರೆಸ್ಸಿಗರಿಗೆ ಸವಾಾಲ್ ಹಾಕಿದ್ದಾರೆ.

About The Author