ಸೌತೆಕಾಯಿ ಚಪ್ಪೆ ಹುಳಿ
ಬೇಕಾಗುವ ಸಾಮಗ್ರಿ : ಮಂಗಳೂರು ಸೌತೇಕಾಯಿ, ತೊಗರಿ ಬೇಳೆ, ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಕೊತ್ತೊಂಬರಿ ಸೊಪ್ಪು, ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು. ಅವಶ್ಯಕತೆ ಇದ್ದಲ್ಲಿ ತುಪ್ಪ ಬಳಸಬಹುದು.
ಮಾಡುವ ವಿಧಾನ: ಬೇಳೆ ಬೇಯಿಸಿ,. ನಂತರ ಅದಕ್ಕೆ ಸೌತೇಕಾಯಿ, , ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಉಪ್ಪು ಹಾಕಿ ಮತ್ತೆ ಬೇಯಿಸಬೇಕು.
ಬಳಿಕ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ನೀಡಬೇಕು. ಮೇಲಿನಿಂದ ಕೊತ್ತೊಂಬರಿ ಸೊಪ್ಪು ಉದುರಿಸಿ, ತುಪ್ಪ ಹಾಕಿ, ಸ್ವಲ್ಪ ಸಮಯ ಪ್ಲೇಟ್ ಮುಚ್ಚಿಡಬೇಕು. ಆಗ ಸಾರು ಇನ್ನೂ ಹೆಚ್ಚು ಘಮ ಘಮಿಸುತ್ತದೆ.
ಬಟಾಣಿ-ಬದನೆ-ನುಗ್ಗೆ ಹುಳಿ
ಬೇಕಾಗುವ ಸಾಮಗ್ರಿ : ಬಟಾಣಿ-ಬದನೆ-ನುಗ್ಗೆ , ತೊಗರಿ ಬೇಳೆ, ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಕೊತ್ತೊಂಬರಿ ಸೊಪ್ಪು, ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು. ಅವಶ್ಯಕತೆ ಇದ್ದಲ್ಲಿ ತುಪ್ಪ ಬಳಸಬಹುದು.
ಮಾಡುವ ವಿಧಾನ: ಬೇಳೆ ಮತ್ತು ಬಟಾಣಿ ಬೇಯಿಸಬೇಕು. ನಂತರ ಅದಕ್ಕೆ ಬದನೆ, , ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಉಪ್ಪು ಹಾಕಿ ಮತ್ತೆ ಬೇಯಿಸಬೇಕು.
ಬಳಿಕ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ನೀಡಬೇಕು. ಮೇಲಿನಿಂದ ಕೊತ್ತೊಂಬರಿ ಸೊಪ್ಪು ಉದುರಿಸಿ, ತುಪ್ಪ ಹಾಕಿ, ಸ್ವಲ್ಪ ಸಮಯ ಪ್ಲೇಟ್ ಮುಚ್ಚಿಡಬೇಕು. ಆಗ ಸಾರು ಇನ್ನೂ ಹೆಚ್ಚು ಘಮ ಘಮಿಸುತ್ತದೆ.
ಪಾಲಕ್ ಸಾರು
ಬೇಕಾಗುವ ಸಾಮಗ್ರಿ : ಪಾಲಕ್, ತೊಗರಿ ಬೇಳೆ, ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಕೊತ್ತೊಂಬರಿ ಸೊಪ್ಪು, ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು. ಅವಶ್ಯಕತೆ ಇದ್ದಲ್ಲಿ ತುಪ್ಪ ಬಳಸಬಹುದು.
ಮಾಡುವ ವಿಧಾನ: ಬೇಳೆ ಬೇಯಿಸಿ,. ನಂತರ ಅದಕ್ಕೆ ಬಿಸಿ ನೀರಿಗೆ ಹಾಕಿ ಸ್ವಲ್ಪ ಕುದಿಸಿ, ಮತ್ತೆ ತಣ್ಣೀರಿಗೆ ಹಾಕಿ ಕ್ಲೀನ್ ಮಾಡಿದ ಪಾಲಕ್ , ಶುಂಠಿ, ಹಸಿಮೆಣಸು, ಬೆಲ್ಲ, ಹುಣಸೆ, ಉಪ್ಪು ಹಾಕಿ ಮತ್ತೆ ಬೇಯಿಸಬೇಕು.
ಬಳಿಕ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ನೀಡಬೇಕು. ಮೇಲಿನಿಂದ ಕೊತ್ತೊಂಬರಿ ಸೊಪ್ಪು ಉದುರಿಸಿ, ತುಪ್ಪ ಹಾಕಿ, ಸ್ವಲ್ಪ ಸಮಯ ಪ್ಲೇಟ್ ಮುಚ್ಚಿಡಬೇಕು. ಆಗ ಸಾರು ಇನ್ನೂ ಹೆಚ್ಚು ಘಮ ಘಮಿಸುತ್ತದೆ.