Ott Movie Review: ದಿ ಇನ್ವಿಟೇಶನ್. ಇವಾ ಅನ್ನೋ ಅನಾಥ ಹುಡುಗಿಯ ಜೀವನದ ಕಥೆ ಇದು. ಆಕೆ ಗೆಳೆಯನ ಮನೆಗೆ ಹೋಗಿ, ಅಲ್ಲಿ ಭಯಾನಕ ಸನ್ನಿವೇಶಗಳನ್ನ ಎದುರಿಸಿ, ಯಾವ ರೀತಿ ಜೀವ ಉಳಿಸಿಕ“ಂಡು ವಾಪಸ್ ಬರುತ್ತಾಳೆ ಅನ್ನೋದನ್ನ ಸಿನಿಮಾದಲ್ಲಿ ತೋರಿಸಲಾಗಿದೆ.
ಸಿನಿಮಾ ಹೆಸರಿಗೆ ತಕ್ಕಂತೆ, ಇವಾಗೆ ಗೆಳೆಯನ ಅಣ್ಣನ ಮದುವೆಗೆ ಹೋಗಲು ಇನ್ವಿಟೇಶನ್ ಸಿಕ್ಕಿರುತ್ತದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಇಂಗ್ಲೆಂಡ್ ಗೆಳೆಯ, ಯುವತಿಯನ್ನು ಪರಿಚಯ ಮಾಡಿಕ“ಂಡು ನನ್ನ ಮನೆಗೆ ನನ್ನ ಅಣ್ಣನ ಮದುವೆಗೆ ಬಾ ಎಂದು ಆಮಂತ್ರಿಸಿರುತ್ತಾನೆ.
ಇವಾಳ ಆಫ್ರಿಕನ್ ಗೆಳತಿ, ಇವಾಳಿಗೆ ಇಂಗ್ಲೆಂಡ್ ಹುಡುಗನನ್ನು ಎಂದಿಗೂ ನಂಬಬೇಡ ಎಂಬ ಎಚ್ಚರಿಕೆ ನೀಡಿರುತ್ತಾಳೆ. ಆದರೆ ಅದನ್ನು ತಮಾಷೆಯಾಗಿ ತೆಗೆದುಕ“ಳ್ಳುವ ಇವಾ, ಇಂಗ್ಲೆಂಡ್ ಯುವಕನ ಜತೆ ನ್ಯೂಯಾರ್ಕ್‌ನಿಂದ ಇಂಗ್ಲೆಂಡ್ ಅರಮನೆಗೆ ಪ್ರಯಾಣ ಬೆಳೆಸುತ್ತಾಳೆ.
ಮದುವೆ ಸಂಭ್ರಮದಲ್ಲಿದ್ದ ಬ್ರಿಟೀಷ್ ಮನೆಯವರಿಂದ ಆಕೆಗೆ ಕೆಲ ದಿನ ರಾಯಲ್ ಟ್ರೀಟ್‌ಮೆಂಟ್ ನೀಡಲಾಗತ್ತೆ. ದಿನದಿಂದ ದಿನಕ್ಕೆ ಆತನ ಪ್ರೀತಿ ಹೆಚ್ಚಾಗುತ್ತಿದ್ದಂತೆ, ಆತನಿಗೆ ಇವಾ ಮನಸೋಲುತ್ತಾಳೆ. ಆತನಿಗೆ ಆಕೆಯನ್ನು `~ಪ್ಪಿಸಿಕ“ಳ್ಳುತ್ತಾಳೆ.
ಆದರೂ ಆಕೆಗೆ ಆ ಮನೆಯಲ್ಲಿ ಯಾವುದೋ ನಕಾರಾತ್ಮಕ ಶಕ್ತಿ ಇದೆ ಅನ್ನೋ ಅನುಮಾನ ಬರುತ್ತದೆ. ಅಲ್ಲದೇ ಆ ಅರಮನೆಯಲ್ಲಿ ಯಾರಿಗೂ ಪ್ರವೇಶವಿಲ್ಲದ ಲೈಬ್ರರಿ ಇರುತ್ತದೆ. 1 ದಿನ ಇವಾ ಆ ಲೈಬ್ರರಿ ಹೋಗಿ ಅಲ್ಲಿ ಅಂಥಾದ್ದೇನಿದೆ ಎಂದು ಹುಡುಕಿದಾಗ ಆಕೆಗೆ ಭಯಾನಕ ಸಂಗತಿ ತಿಳಿಯುತ್ತದೆ.
ಆ ಸಂಗತಿ ಏನು..? ಆ ಲೈಬ್ರರಿಯಲ್ಲಿ ಅಂಥಾದ್ದೇನಿರುತ್ತದೆ..? ಆಕೆ ಯಾವ ರೀತಿಯಾಗಿ ದುಷ್ಟ ಶಕ್ತಿಗಳ ಕೈಯಿಂದ ತಪ್ಪಿಸಿಕ“ಂಡು ಬರುತ್ತಾಳೆ ಅನ್ನೋದನ್ನು ನೀವು ಸಿನಿಮಾದಲ್ಲೇ ನೋಡಬೇಕು. ಜೀಯೋ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಲಭ್ಯವಿದೆ.




