Garuda Purana: ಗರುಡ ಪುರಾಣದಲ್ಲಿ ಮನುಷ್ಯನ ಜೀವನದ ಹಲವು ಸತ್ಯ, ಪಾಪಕ್ಕೆ ಮಾಡಬೇಕಾದ ಪ್ರಾಯಶ್ಚಿತ, ಪಾಪ ಮಾಡಿದಾಗ ಸಿಗುವ ಶಿಕ್ಷೆ ಮತ್ತು ಪುಣ್ಯ ಪ್ರಾಪ್ತಿಗಾಗಿ ಮಾಡಬೇಕಾದ ಕಾರ್ಯಗಳು. ಇವೆಲ್ಲವನ್ನೂ ವಿವರಿಸಲಾಗಿದೆ. ಹಾಗಾಗಿ ಇಂದು ನಾವು ಪುಣ್ಯ ಪ್ರಾಪ್ತಿಗಾಗಿ ನಾವು ಮನಸ್ಸಿನಿಂದ ಮಾಡಬೇಕಾದ ಕಾರ್ಯಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಪೋಷಕರು ಮತ್ತು ಹಿರಿಯರ ಸೇವೆ ಮಾಡಿ: ನಾವು ನಮ್ಮ ಪೋಷಕರು, ಮನೆ ಹಿರಿಯರು ಮತ್ತು ಗುರುಗಳ ಸೇವೆ ಮಾಡಬೇಕು. ನೀವು ಅವರಿಗೆ ಪ್ರೀತಿ, ಕಾಳಜಿ, ಗೌರವ ತೋರಿಸುವುದೇ ಅವರಿಗೆ ನೀವು ಮಾಡುವ ಸೇವೆ. ಹಾಗಾಗಿ ಪೋಷಕರು ಮತ್ತು ಗುರುಗಳ ಬಗ್ಗೆ ಗೌರವ ಮತ್ತು ಪ್ರೀತಿ, ಕಾಳಜಿ ತೋರುವುದನ್ನು ಮರೆಯಬೇಡಿ.
ದಾನ ಮತ್ತು ಸಮಾಜ ಸೇವೆ ಮಾಡಿ: ದಾನ ಮಾಡಿ ದರಿದ್ರನಾಗಬೇಡ ಎಂದು ಹಿರಿಯರು ಹೇಳುತ್ತಾರೆ. ಅಂದ್ರೆ ನಮ್ಮ ಬಳಿ ಇರುವುದಕ್ಕಿಂತ ಹೆಚ್ಚು ದಾನ ಮಾಡಿದರೆ ದರಿದ್ರರೇ ಆಗುತ್ತೇವೆ. ಆದರೆ ನಮ್ಮ ಬಳಿ ಇರುವ ಹಣದಲ್ಲಿ ಅಲ್ಪ ಪ್ರಮಾಣದ ಹಣವನ್ನು ನಾವು ದಾನ ಕಾರ್ಯಕ್ಕೆ ಮತ್ತು ಸಮಾಜ ಸೇವೆಗೆ ಬಳಸಬಹುದು.
ದೇವರ ಬಗ್ಗೆ, ಧರ್ಮಕಾರ್ಯಗಳ ಬಗ್ಗೆ ನಂಬಿಕೆ ಇರಲಿ: ನಾವು ದೇವರಲ್ಲಿ ನಂಬಿಕೆ ಇರಿಸಿದ್ದಲ್ಲಿ, ಉತ್ತಮ ವ್ಯಕ್ತಿಗಳಾಗುತ್ತೇವೆ. ಏಕೆಂದರೆ, ದೇವರ ಮೇಲೆ ನಂಬಿಕೆ, ಭಕ್ತಿ ಇರುವವರು ತಪ್ಪು ಕೆಲಸ ಮಾಡಲು ಹಿಂಜರಿಯುತ್ತಾರೆ. ಅಲ್ಲದೇ, ಪುಣ್ಯ ಕಾರ್ಯಗಳಲ್ಲಿ ನಂಬಿಕೆ ಇಡುತ್ತಾರೆ. ಮತ್ತು ಧಾರ್ಮಿಕ ಕಾರ್ಯಗಳು ನಮ್ಮ ಪುಣ್ಯ ಪ್ರಾಪ್ತಿಗಾಗಿ 1 ಉತ್ತಮ ದಾರಿಯಾಗಿದೆ.
ಜೀವನದಲ್ಲಿ ನಿಯತ್ತಾಗಿರಿ: ಎಲ್ಲಕ್ಕಿಂತ ಮುಖ್ಯವಾಗಿ ನೀವು ಪುಣ್ಯ ಪ್ರಾಪ್ತಿ ಮಾಡಬೇಕು ಎಂದರೆ, ಜೀವನದಲ್ಲಿ ಅಡ್ಡ ದಾರಿ ಹಿಡಿಯದೇ, ನಿಯತ್ತಾಗಿರಬೇಕು. ಏನೇ ಆದರೂ ದುರಾಸೆಗೆ ಬೀಳದೇ, ನಿಯತ್ತಾಗಿ ಜೀವನ ಮಾಡಿದರೆ, ದೇವರು ನಿಮಗೆ ಸಾಥ್ ನೀಡುತ್ತಾನೆ.




