Hubli News: ಆಸ್ಪತ್ರೆಯಿಂದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಡಿಸ್ಚಾರ್ಜ್

Hubli News: ಕಳೆದ ಭಾನುವಾರ ವಾಹನ ಅಪಘಾತದ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಅಪಘಾತದಲ್ಲಿ ಶ್ರೀಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ತೊಂದರೆ ಇಲ್ಲ ಎಂದು ತಿಳಿಸಲಾಗಿದೆ.

ಚಿಕಿತ್ಸೆ ಬಳಿಕ ವೈದ್ಯರ ಸಲಹೆಯಂತೆ ಶ್ರೀಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಶ್ರೀಗಳ ಜೊತೆಯಲ್ಲಿದ್ದ ಪರಿವಾರದವರೂ ಆರೋಗ್ಯವಾಗಿದ್ದಾರೆ.

ಮೂಲ ರಾಮದೇವರ ಅನುಗ್ರಹದಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಶ್ರೀಮಠದ ಆಡಳಿತ ಅಧಿಕಾರಿ ವಿದ್ಯಾಧೀಶ ಆಚಾರ್ಯ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡದಂತೆ, ಅನವಶ್ಯಕ ಹಾಗೂ ತಪ್ಪು ಮಾಹಿತಿ ಹರಡದಂತೆ ಅವರು ಮನವಿ ಮಾಡಿದ್ದಾರೆ.

About The Author