Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಕಾಂಗ್ರೆಸ್ನಲ್ಲಿ ಮುಸ್ಲಿಂರ ಬಗ್ಗೆ ತಾರತಮ್ಯವಿದೆ ಎಂಬ ಆರೋಪಕ್ಕೆ ಉತ್ತರಿಸಿದ್ದಾರೆ.
ಮುಂದಕ್ಕೆ ಎಲ್ಲವೂ ಚೇಂಜ್ ಆಗತ್ತೆ ಎಂದಿರುವ ನಲಪಾಡ್, ಡಿ.ಕೆ.ಶಿವಕುಮಾರ್ ಅವರ ಮೇಲೆ ನಂಬಿಕೆ ಇದೆ ನನಗೆ, ಅವರು ಎಲ್ಲ ಸಮುದಾಯದವರನ್ನ ಅರ್ಥಮಾಡಿಕ“ಳ್ಳುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೇ ಬರೀ ಮುಸ್ಲೀಂರು ಓಟ್ ಹಾಕಿದ್ರೆ ಮಾತ್ರಾ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಸಮುದಾಯದವರೂ ಓಟ್ ಹಾಕಲೇಬೇಕು. ಎಂದಿದ್ದಾರೆ. ಅಲ್ಲದೇ ಬಿಜೆಪಿಯಲ್ಲಿ 5 ಲೀಡರ್ಗಳ ಹೆಸರು ಹೇಳಿ ಎಂದು ನಲಪಾಡ್ ಪ್ರಶ್ನೆ ಹಾಕಿದ್ದಾರೆ.
ಲೀಡರ್ ಹೆಸರು ಹೇಳಿದ ಬಳಿಕ ಮಾತನಾಡಿರುವ ನಲಪಾಡ್, ಇವರೆಲ್ಲ ಸೇರಿದರೂ ಡಿಕೆಶಿಯನ್ನು ಸೋಲಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರೂ ನಮ್ಮ ಜತೆ ಇದ್ದಾರೆ. ಅವರಿಗೂ ಕಾಂಗ್ರೆಸ್ ಸಾಕಷ್ಟು ಮಾಡಿದೆ. 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಅವರು ಕಾಂಗ್ರೆಸ್ ಬಿಟ್ಟು ಎಲ್ಲ ಹೋಗುವುದಿಲ್ಲ. ಅವರು ಜನರ ಪರವಾಗಿ ಇರುವವರು. ಅವರು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷವನ್ನು ಬೆಂಬಲಿಸಲು ಸಾಧ್ಯವೇ ಇಲ್ಲವೆಂದು ನಲಪಾಡ್ ಹೇಳಿದ್ದಾರೆ.




