ಆ ಭಯ ನಂಗೂ ಇಲ್ಲ ನನ್ನ ಜೀವಮಾನಕು ಇಲ್ಲಾ…: Mohammed Haris Nalapad Exclusive Interview

Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ನನ್ನ ಮೇಲೆ ಎಫ್‌ಐಆರ್ ಹಾಾಕುತ್ತಾರೆ, ಜೈಲಿಗೆ ಹಾಕುತ್ತಾರೆ ಅಥವಾ ನನ್ನ ರಾಜಕೀಯ ಜೀವನ ಹಾಳು ಮಾಡುತ್ತಾರೆ ಎನ್ನುವ ಭಯ ನನಗೂ ಇಲ್ಲ. ನನ್ನ ಜೀವಮಾನಕ್ಕೂ ಇಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿರುವ ನಲಪಾಡ್, ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ, ನನ್ನ ಮೇಲೆ ಕೇಸ್ ಹಾಕಿ, ನನ್ನನ್ನು ಜೈಲಿಗೆ ಹಾಕಿಸುತ್ತಾರೆಂಬ ಭಯ ನನಗೂ ಇಲ್ಲ, ನನ್ನ ಜೀವಮಾನಕ್ಕೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಭಯದ ಅರ್ಥ ಏನು ಅನ್ನೋದೇ ನನಗೆ ತಿಳಿದಿಲ್ಲ. ಜೀವನ ನಡೆಸಲು 1 ಮನೆ, ಆಹಾರ, ದುಡ್ಡು ಇದೆಲ್ಲ ಬೇಕು. ಅದೆಲ್ಲ ನನ್ನ ಬಳಿ ಇದೆ. ಜೀವನ ಮಾಡಲು ನನಗೆ ಅಷ್ಟು ಸಾಕು. ಅಲ್ಲದೇ ಎಂಥ ಕಷ್ಟವನ್ನಾದ್ರೂ ಸಹಿಸುವ ಶಕ್ತಿ ನನ್ನಲ್ಲಿದೆ. ನನ್ನ ಮೇಲೆ ಕೇಸ್ ಹಾಕೋದು, ಜೈಲಿಗೆ ಕಳಿಸೋದು ಈ ಭಯ ಎಲ್ಲಾ ಇಲ್ಲಾ ನನಗೆ. ಅಮಿತ್ ಶಾ, ಮೋದಿಯವರನ್ನೇ ಬೈಯ್ಕೋಂಡು ತಿರಗ್ತಿದ್ದವರು ನಾವು. ಇದ್ಯಾವ್ ಮಹಾ ಎಂದು ನಲಪಾಡ್ ಸವಾಾಲ್ ಹಾಕಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author