Political News: 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ನಾನೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬರ್ತೀನಿ ಎಂದು ಶಾಸಕ ಎಚ್.ಟಿ.ಮಂಜು ಹೇಳಿದ್ದಾರೆ.
ಮಂಡ್ಯದ ಶೀಳನೆರೆ ಗ್ರಾಮದಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಸಂಪರ್ಕ ರಸ್ತೆಯ ಹಳ್ಳಕ್ಕೆ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಸುಮಾರು 80 ಲಕ್ಷ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಮಂಜು ಭೂಮಿ ಪೂಜೆ ನರವೇರಿಸಿದರು.
ಬಳಿಕ ಮಾಧ್ಯಮದ ಬಳಿ ಮಾತನಾಡಿರುವ ಶಾಸಕ ಮಂಜು, ಜನರ ಆಶೀರ್ವಾದಕ್ಕೆ ನಾನು ಚಿರಋಣಿಯಾಗಿದ್ದೇನೆ. ಇನ್ನ“ಂದು ಅವಕಾಶ ಸಿಕ್ಕರೆ ನಿಮ್ಮ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಮಂಜು ಹೇಳಿದ್ದಾರೆ.
ಅಲ್ಲದೇ ನಾನು ಬಡ ರೈತರ ಮಗ, ನಾನು ಸಾಮಾನ್ಯವಾಗಿ, ಸಾಮಾನ್ಯನಾಗಿ ಜನರ ಮಧ್ಯೆ ಇರಲು ಇಚ್ಛಿಸುವ ವ್ಯಕ್ತಿ. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಬೇಕಾದ ಹಾಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. 2023ರ ಚುನಾವಣೆಯಲ್ಲಿ ನನ್ನನ್ನು ಹೆಚ್ಚು ಮತ ನೀಡಿ ಗೆಲ್ಲಿಸಿದ್ದೀರಿ. ಈ ಕಾರಣಕ್ಕೆ ಇಂದು ನಾನು ನಿಮ್ಮ ಸೇವಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಶಾಸಕ ಮಂಜು ಹೇಳಿದ್ದಾರೆ.
ನಿಮಗೇನೇ ಕೆಲಸವಿದ್ದರೂ ನೀವು ನನ್ನನ್ನು ಯಾವಾಗ ಬೇಕಾದರೂ ಸಂಪರ್ಕಿಸಬಹುದು. ನಿಮ್ಮ ಸೇವೆಗಾಗಿ ನಾನು ಸದಾ ಸಿದ್ಧನಾಗಿರುತ್ತೇನೆ. ನಾನು ಶಾಸಕ ಎಂಬ ಅಹಂ ನನಗಿಲ್ಲ ಎಂದು ಮಂಜು ಹೇಳಿದ್ದಾರೆ.
ಈ ವೇಳೆ ತಾಪಂ ಮಾಜಿ ಸದಸ್ಯ ಹುಲ್ಲೇಗೌಡ, ಟಿಪಿಸಿಎಂಎಸ್ ಮಾಜಿ ಅಧ್ಯಕ್ಷ ಟಿ.ಬಲದೇವ್, ಪುರಸಭಾ ಮಾಜಿ ಸದಸ್ಯ ಎಚ್.ಡಿ.ಅಶೋಕ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗೌತಮಿ, ಗುತ್ತಿಗೆದಾರ ಎನ್.ಆರ್.ರಮೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಲಿಂಗು, ಮುಖಂಡರಾದ ಶೀಳನೆರೆ ರಾಘು, ನಾಟನಹಳ್ಳಿ ಎನ್.ಜಿ.ಸಾಗರ್, ಕೆ.ಎನ್.ರಾಘವೇಂದ್ರ, ಪ್ರಸನ್ನ, ವಿಜಯ್ ಕುಮಾರ್ ಸೇರಿದಂತೆ ಶೀಳನೆರೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಜರಿದ್ದರು.




