Horoscope: ಈ ರಾಶಿಯವರು ಪ್ರೀತಿಸಿದವರಿಗಾಗಿ ಜೀವ ನೀಡಲು ಸಿದ್ಧರಿರುತ್ತಾರೆ

Horoscope: ಪ್ರೀತಿಸಿದರೆ ಅಥವಾ ವಿವಾಹವಾದರೆ, ಜೀವನದಲ್ಲಿ ಎಂದಿಗೂ ಮೋಸ ಮಾಡದೇ, ಪ್ರೀತಿ, ಕಾಳಜಿ ನೀಡಿ, ಜೀವನಪೂರ್ತಿ ಜೀವನ ಸಂಗಾತಿಯ ಜತೆಗಿರುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. ನಿಮಗೂ ಈ ರಾಶಿಯವರು ಜೀವನ ಸಂಗಾತಿಯಾಗಿ ಸಿಕ್ಕರೆ ಖಂಡಿತವಾಗಿಯೂ ನೀವೂ ಅವರ ಜತೆ ನಿಯತ್ತಿನಿಂದ ಇರಿ. ಹಾಗಾದ್ರೆ ಯಾವ ರಾಶಿಯವರು ಇವರು ಅಂತಾ ತಿಳಿಯೋಣ ಬನ್ನಿ..

ವೃಷಭ: ವೃಷಭ ರಾಶಿಯವರು ತಾಳ್ಮೆಯ ಸಾಕಾರಮೂರ್ತಿಗಳು. ಜೀವನದಲ್ಲಿ ಏನೇ ಕಷ್ಟ-ಕಾರ್ಪಣ್ಯ ಬಂದರೂ ಜೀವನ ಸಂಗಾತಯ ಜತೆ ನಿಂತು ಅದನ್ನು ಬಗೆಹರಿಸಿ, ಜೀವನ ಮಾಡುತ್ತಾರೆ ವಿನಃ, ಸಂಗಾತಿಯನ್ನು ಎಂದಿಗೂ ದೂರುವುದಿಲ್ಲ. ಇವರೆಂದಿಗೂ ತಮ್ಮ ಸಂಗಾತಿಗೆ ಮೋಸ ಮಾಡಲು ಇಚ್ಛಿಸುವುದಿಲ್ಲ.

ಕರ್ಕ: ಇನ್ನು ಕರ್ಕ ರಾಶಿಯವರು ಜೀವನದಲ್ಲಿ ಏನೇ ಕಳೆದುಕ“ಂಡರೂ, ಜೀವನ ಸಂಗಾತಿಯ ಪ್ರೀತಿ, ಕಳೆದುಕ“ಳ್ಳಲು ಇಚ್ಛಿಸುವುದಿಲ್ಲ. ಇವರು ಯಾರಿಗಾದರೂ ಸಹಾಯ ಮಾಡಲು, ಪ್ರೀತಿ, ಕಾಳಜಿ ಮಾಡಲು ನಿರ್ಧರಿಸಿದರೆ, ತಮ್ಮ ಬಗ್ಗೆಯೂ ಯೋಚಿಸವುದಿಲ್ಲ. ಹಾಗಾಗಿ ಕರ್ಕ ರಾಶಿಯವರನ್ನು ವಿವಾಹವಾಗುವವರು ಪುಣ್ಯವಂತರು ಎನ್ನಬಹುದು.

ಸಿಂಹ: ಸಿಂಹ ರಾಶಿಯವರು ಸದಾ ಉತ್ಸಾಹಿಗಳು. ಅದೇ ರೀತಿ ಪ್ರೀತಿ, ಕಾಳಜಿ ವಿಷಯದಲ್ಲೂ ಸಿಂಹ ರಾಶಿಯವರು ಉತ್ಸಾಹಿಗಳೇ. ಅಲ್ಲದೇ ಸಂಗಾತಿಗೆ ಗೌರವ, ಪ್ರೀತಿ ತೋರುತ್ತಾರೆ. ಅವರ ಮೇಲೆ ನಂಬಿಕೆ ಇಡುತ್ತಾರೆ.

ತುಲಾ: ಇನ್ನು ತುಲಾ ರಾಶಿಯವರು ಕೂಡ ಜೀವನ ಸಂಗಾತಿಯನ್ನು ಅತೀ ಹೆಚ್ಚು ಪ್ರೀತಿಸುವವರು. ಅಲ್ಲದೇ ಹೆಚ್ಚು ಕಾಳಜಿಯನ್ನೂ ಮಾಡುತ್ತಾರೆ. ಆದರೆ ಇವರಿಗೆ ಹಂಗಿಸಿ ಮಾತನಾಡುವುದು, ಪದೇ ಪದೇ ಜಗಳವಾಡುವುದೆಲ್ಲ ಇಷ್ಟವಾಗುವುದಿಲ್ಲ. ಸಂಬಂಧ ಉಳಿಸಲು ಉತ್ತಮ ಪ್ರಯತ್ನ ಮಾಡುವವರು ಕೂಡ ತುಲಾ ರಾಶಿಯವರೇ.

About The Author