2001 ಅ.7ರಂದು ಗುಜರಾತ್ ಸಿಎಂ ಆಗಿ ಮೋದಿ ಪ್ರಮಾಣವಚನ ಸ್ವೀಕಾರ: ವೀಡಿಯೋ ಶೇರ್ ಮಾಡಿದ ಆರ್.ಅಶೋಕ್

Political News: ಪ್ರಧಾನಿ ನರೇಂದ್ರ ಮೋದಿಯವರು 2001ರಲ್ಲಿ ಅ.7ರಂದು ಗುಜರಾತ್ ಸಿಎಂ ಆಗಿ ಪ್ರಪ್ರಥಮ ಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಬಳಿಕ 2014ರವರೆಗೆ ಸತತ 13 ವರ್ಷಗಳ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ.

2014ರಲ್ಲಿ ದೇಶದ ಪ್ರಧಾನಿಯಾದ ಬಳಿಕ ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನರೇಂದ್ರ ಮೋದಿ, ಇದುವರೆಗೂ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಇಂದಿಗೆ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿ 35 ವರ್ಷವಾಗಿದೆ. ಈ ಸುಸಂದರ್ಭದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಮೋದಿ ಪ್ರಪ್ರಥಮ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಅಪರೂಪದ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಅಲ್ಲದೇ, 2001 ರ ಇದೇ ದಿನದಂದು ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಸಾರ್ವಜನಿಕ ಸೇವೆಯಲ್ಲಿ‌ ಹೊಸ ಇತಿಹಾಸಕ್ಕೆ ಪಾದಾರ್ಪಣೆ ಮಾಡಿದರು. ಗುಜರಾತ್‌ನಿಂದ ಆರಂಭವಾದ ಈ ಸೇವಾ ಪಯಣ ಮುಂದೆ ದೇಶದ ಪ್ರಧಾನಮಂತ್ರಿಯಾಗಿ, ಇಂದು ‘ವಿಕಸಿತ ಭಾರತ’ದ ಸಂಕಲ್ಪದೊಂದಿಗೆ ಮುಂದುವರಿದಿದೆ. ಪ್ರಧಾನಿಯವರ ಜನಸೇವೆಯ ಬದ್ಧತೆ, ಜನರ ಪಾಲ್ಗೊಳ್ಳುವಿಕೆಯ ಆಡಳಿತ ನೀಡುವ ಇಚ್ಛಾಶಕ್ತಿ, ರಾಷ್ಟ್ರಸೇವೆ ಹಾಗೂ ಅಭಿವೃದ್ಧಿಯ ಸಂಕಲ್ಪ ಮತ್ತಷ್ಟು ಚುರುಕಾಗಿ ಸಾಗಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಎಂದು ಆರ್.ಅಶೋಕ್ ವಿಶ್ ಮಾಡಿದ್ದಾರೆ.

About The Author