Sandalwood: ಸದ್ಯ ಕನ್ನಡದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಪ್ರೇಮದ ಊರಲಿ ಸಿನಿಮಾ. ಈ ಸಿನಿಮಾದಲ್ಲಿ ನಟಿಸಿರುವ ರಮಿಕಾ ಶಿವು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಮಿಕಾ ಅವರಿಗೆ ನೆಚ್ಚಿನ ನಟಿ ಅಂದ್ರೆ ಸಾಯಿ ಪಲ್ಲವಿ ಅಂತೆ.
ಈ ಬಗ್ಗೆ ಮಾತನಾಡಿರುವ ರಮಿಕಾ, ನಾನು ಪ್ರತೀ ಸಿರಿಯಲ್ ಮಾಡುವಾಗಲೂ ನಾನು ತುಂಬಾ ಲೆಸನ್ ಕಲಿತಿದ್ದೇನೆ. ಸಿರಿಯಲ್ ನಿಂದ ಬ್ರೇಕ್ ಪಡೆದು ಸಿನಿಮಾ ಇಂಡಸ್ಟ್ರಿಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂದುಕxಡಿದ್ದೇನೆ ಎಂದು ರಮಿಕಾ ಹೇಳಿದ್ದಾರೆ.
ಇನ್ನು ನಿರ್ದೇಶಕರ ಬಗ್ಗೆ ಮಾತನಾಡಿರುವ ರಮಿಕಾ, ನಮಗೇ ತಿಳಿದಿರೋದಿಲ್ಲಾ. ನಾವು ಇಷ್ಟು ಚೆಂದವಾಗಿ ನಟನೆ ಮಾಡ್ತೀವಿ ಅಂತಾ. ಆ ರೀತಿ ನಮ್ಮಿಂದಾ ಆ್ಯಕ್ಟಿಂಗ್ ತೆಗಿಸ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಪ್ರೇಮದ ಊರಲ್ಲಿ ಸಿನಿಮಾ ಹೆಸರನ್ನು ಮುಂಚೆ ರುಕ್ಮಿಣಿ ಮತ್ತು ವಸಂತ ಅಂತಾ ಇಟ್ಟಿದ್ರು. ಆದ್ರೆ ಇದೀಗ ಅದನ್ನು ಪ್ರೇಮದ ಊರಲಿ ಎಂದು ಮರು ನಾಮಕರಣ ಮಾಡಿ ಸಿನಿಮಾ ರಿಲೀಸ್ ಮಾಡಲಾಗಿದೆ.
ಈ ಸಿನಿಮಾದ ಬಗ್ಗೆಯೇ ರಮಿಕಾ ಮಾತನಾಡಿದ್ದು, ರಂಗಾಯಣ ರಘು ನಟನೆಯ ಬಗ್ಗೆ ಬಣ್ಣಿಸಿದ್ದಾರೆ. ಅವರ ಜತೆ ನಟಿಸುವಾಗ ನನಗೆ ಹೆದರಿಕೆಯಾಗುತ್ತಿತ್ತು. ಆದರೆ ಅವರು ತುಂಬಾ ಸರಳ, ಸ್ನೇಹ ಜೀವಿ, ಅತ್ಯುತ್ತಮ ಕಲಾವಿದರು ಎಂದು ರಮಿಕಾ ಶಿವು ಹೇಳಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ನಟಿ ಸಾಯಿ ಪಲ್ಲವಿ ಎಂದು ರಮಿಕಾ ಹೇಳಿದ್ದಾರೆ. ಪ್ರೇಮದ ಊರಲಿ ಸಿನಿಮಾ ಬಗ್ಗೆ ರಮಿಕಾ ಇನ್ನೂ ಸುಮಾರು ವಿಷಯ ಮಾತನಾಡಿದ್ದು, ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




