Spiritual: ಶಿವ ಪುರಾಣದಲ್ಲಿ ಕಲಿಯುಗದಲ್ಲಿ ಸ್ತ್ರೀ-ಪುರುಷರು ಈ ರೀತಿ ಇರುತ್ತಾರೆ ಎಂದು ಹೇಳಲಾಗಿತ್ತು.

Spiritual: ಹಲವು ವರ್ಷಗಳ ಹಿಂದೆ ಬರೆದಿದ್ದ ಶಿವ ಪುರಾಣ ಗ್ರಂಥದಲ್ಲಿ ಕಲಿಯುಗದಲ್ಲಿ ಸ್ತ್ರೀ ಪುರುಷರು ಯಾವ ರೀತಿ ಇರುತ್ತಾರೆ ಎಂದು ಹೇಳಲಾಗಿತ್ತು. ಹಾಗಾದ್ರೆ ಶಿವ ಪುರಾಣದಲ್ಲಿ ಈ ಬಗ್ಗೆ ಏನು ಹೇಳಲಾಗಿದೆ ಎಂದು ತಿಳಿಯೋಣ ಬನ್ನಿ.

ಶಿವಪುರಾಣದಲ್ಲಿ ಹೇಳಿರುವ ಪ್ರಕಾರ, ಪುರುಷರು ಸತ್ಯದ ಹಾದಿಯಲ್ಲಿ ನಡೆಯಲು ಇಚ್ಛಿಸುವುದಿಲ್ಲ. ನಿಯತ್ತು ಕಡಿಮೆಯಾಗುತ್ತ ಬರುತ್ತದೆ. ಕಲಿಯುಗದಲ್ಲಿ ಹಲವು ಪುರುಷರು ಸದ್ಗುಣಗಳಿಂದ ದೂರವಾಗುತ್ತ ಹೋಗುತ್ತಾರೆ. ವ್ಯಂಗ್ಯವಾಡುವುದು, ಮನಸ್ಸು ನೋಯಿಸುವ ಗುಣಗಳನ್ನು ಅಳವಡಿಸಿಕ“ಳ್ಳುತ್ತಾರೆ. ಹಿತೈಶಿಗಳ ನುಡಿಗಳು ಕಹಿ ಎನ್ನಿಸಲು ಪ್ರಾರಂಭಿಸುತ್ತದೆ. ಪರಸ್ತ್ರೀ ವ್ಯಾಮೋಹ ಹೆಚ್ಚಾಗಿರುತ್ತದೆ. ಪಶುವಿನ ಮನಸ್ಥಿತಿಗೆ ಬರುತ್ತಾರೆ.

ಇನ್ನು ಮಹಿಳೆಯರು ಕಲಿಯುಗದಲ್ಲಿ ಹೇಗಿರುತ್ತಾರೆ ಎಂದು ಶಿವಪುರಾಣದಲ್ಲಿ ಈ ರೀತಿ ಹೇಳಲಾಗಿದೆ. ಪತಿಯನ್ನು ಅಗೌರವಿಸಿ, ಪರಪುರುಷನ ಸಂಗ ಮಾಡಲು ಇಚ್ಛಿಸುತ್ತಾರೆ. ಪ್ರೀತಿ, ಕಾಳಜಿ, ಗುಣಕ್ಕಿಂತ ಹಣವೇ ಉತ್ತಮ ಅನ್ನುವ ಮನಸ್ಥಿತಿಗೆ ಬರುತ್ತಾರೆ. ಕರುಣೆ, ಸೇವಾ ಮನೋಭಾವ ಅತೀ ಕಡಿಮೆ ಪ್ರಮಾಣವಾಗಿರುತ್ತದೆ. ಅಲ್ಲದೇ, ಆಹಾರದ ವಿಷಯದಲ್ಲೂ ನಿಶ್ಕಾಳಜಿ ಉಳ್ಳವರಾಗುತ್ತಾರೆಂದು ಹೇಳಲಾಗಿದೆ.

About The Author