Haveri News: ಹಾವೇರಿ: ಹಾವೇರಿಯ ಬಂಕಾಪುರದಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಕೃತ್ಯ ನಡೆದಿದೆ. ವಾರದ ಬಡ್ಡಿ ಹಣ ಕಟ್ಟದಿದ್ದಕ್ಕೆ ಸಾಲ ನೀಡಿದವರು, ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ, ಚಿತ್ರ ಹಿಂಸೆ ನೀಡಿದ್ದಾರೆ.
ಮಣಿಕಂಠ ಎಂಬಾತ 70 ಸಾವಿರ ಸಾಲ ಪಡೆದಿದ್ದು, 1,500 ರಿಂದ 2 ಸಾವಿರವರೆಗೆ ಪ್ರತೀ ವಾರ ಬಡ್ಡಿ ಕಟ್ಟುತ್ತಿದ್ದ. ಆದರೆ ಕೆಲ ವಾರದಿಂದ ಸಾಲದ ಬಡ್ಡಿ ಪಾವತಿಸದ ಕಾರಣ, ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾಧಿ, ಸುನೀಲ್ ಕತ್ತಿ ಎಂಬುವವರೆಲ್ಲ ಸೇರಿ, ಮಣಿಯನ್ನು ಕಿಡ್ನ್ಯಾಪ್ ಮಾಡಿ, ನಾಲ್ಕು ದಿನ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ.
ಅಲ್ಲದೇ, ಆತನಿಗೆ ಮೂತ್ರ ಕುಡಿಸಿದ್ದಲ್ಲದೇ, ಪೈಪ್ನಿಂದ ಕಟ್ಟಿಗೆಯಿಂದ ಬಡಿದು, ಸಿಗರೇಟ್ನಿಂದ ಸುಟ್ಟು ಹಿಂಸೆ ನೀಡಿದ್ದಾರೆ. ಮಣಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿಯಾಗಿದ್ದು, ಬರುತ್ತಿದ್ದ ಸಂಬಳದಲ್ಲಿ ಹಣ ಉಳಿಸಿ, ಬಡ್ಡಿ ಕಟ್ಟುತ್ತಿದ್ದ. ಆದರೆ ಬಡ್ಡಿ ಹಣ ನೀಡಲು ತಡವಾದ ಕಾರಣ, ಅ.16ರಂದು ನಿರ್ಜನ ಪ್ರದೇಶಕ್ಕೆ ಕರೆದೋಯ್ದು ಚಿತ್ರಹಿಂಸೆ ನೀಡಿದ್ದಾರೆ.
ಆದರೆ ಮಣಿ ಅ.20 ರಂದು ಅಪರಿಚಿತ ವ್ಯಕ್ತಿಯ ಸಹಾಯದಿಂದ ಎಸ್ಕೇಪ್ ಆಗಿ, ಮನೆಯವರಿಗೆ ಹೇಗೋ ವಿಷಯ ತಿಳಿಸಿದ್ದಾನೆ. ಪೆಟ್ಟು ತಿಂದು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಣಿಗೆ ಹಾವೇರಿ ಜಿಲ್ಲಾಸ್ಪತ್ರೆಯಸ್ಸಿ ಚಿಕಿತ್ಸೆ ಕ“ಡಿಸಲಾಗಿದೆ. ಬಳಿಕ ಸ್ಥಳೀಯ ಸ್ಟೇಶನ್ನಲ್ಲಿ ದೂರು ನೀಡಿದ್ದು, ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾಧಿ, ಸುನೀಲ್ ಕತ್ತಿ ವಿರುದ್ಧ ದೂರು ದಾಖಲಾಗಿದೆ.




