Bigg Boss kannada: ಕಳೆದ 12 ಸೀಸನ್ನಲ್ಲೂ ಬಿಗ್ಬಾಸ್ ಕನ್ನಡ ಇಷ್ಟು ಬೋರ್ ಬಂದಿರಲಿಲ್ಲ. ಆ ರೀತಿ ಈ ಸೀಸನ್ ಬೋರ್ ಆಗಿದೆ. ಶೋ ಅರ್ಥಹೀನವಾಗಿದೆ ಅಂತಲೇ ಹಲವರು ಹೇಳುತ್ತಿದ್ದಾರೆ. ಬಿಗ್ಬಾಸ್ ನೋಡಬೇಕು ಎಂಬ ಕುತೂಹಲವೇ ಇಲ್ಲದಂತಾಗಿದೆ ಎಂಬ ಮಾತೇ ಕೇಳಿ ಬರುತ್ತಿದೆ. ಆದ್ರೀಗ ಬಿಗ್ಬಾಸ್ ಮನೆಗೆ ಕಳೆದ ಬಿಗ್ಬಾಸ್ನ ರನ್ನರ್ ಅಪ್ ಆಗಿದ್ದ ರಕ್ಷಿತಾ ಎಂಟ್ರಿಯಾಗಿದೆ.
ಶೆಟ್ಟಿ ಡಾನ್ ಎಂದೇ ಖ್ಯಾತಿ ಪಡೆದಿರುವ ಸೌಂದರ್ಯ ಶೆಟ್ಟಿಯವರು ಮನೆಯ ಕ್ಯಾಪ್ಟನ್ ಆಗಿದ್ದು, ಅವರ ಸ್ವಯಂವರ ನಡೆದಿದೆ. ಹಾಗಾಗಿ ಸೌಂದರ್ಯ ಅವರ ತಾಯಿಯಾಗಿ ಪ್ರಶಾಂತ್ ಮತ್ತು ತಂದೆಯಾಗಿ ತಾಂಡವ್ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸ್ವಯಂವರದ ಮಧ್ಯೆ ರಕ್ಷಿತಾ ಪ್ರಶಾಂತಿಯ ಮಗಳಾಗಿ ಎಂಟ್ರಿ ನೀಡಿದ್ದಾರೆ.
ಪ್ರಶಾಂತಿ ಎಂಬಿಎ ಮಾಡಲು ಮಲೇಶಿಯಾಗೆ ಹೋದಾಗ, ಅಲ್ಲಿ ಅವರಿಗೆ ಓರ್ವ ವ್ಯಕ್ತಿಯ ಜತೆ ಪ್ರೇಮವಾಗಿ, ಆ ಪ್ರೇಮಕ್ಕೆ ಸಾಕ್ಷಿಯಾದವಳೇ ರಕ್ಷಿತಾ ಅಂತೆ. ಹೀಗಾಗಿ ಈಗ ರಕ್ಷಿತಾ ಸೌಂದರ್ಯಾಳ ಸಹೋದರಿಯಾಗಿ ಬಂದಿದ್ದಾರೆ. ರಕ್ಷಿತಾ ಅತಿಥಿಯಾಗಿ ಬಂದಿದ್ದಾರಾ ಅಥವಾ ವೈಲ್ಡ್ ಕಾರ್ಡ್ ಎಂಟ್ರಿನಾ ಅನ್ನೋದು ಇನ್ನೂ ತಿಳಿಯಬೇಕಿದೆ.
ಇನ್ನು ರಕ್ಷಿತಾ ಬಂದಿದ್ದನ್ನು ನೋಡಿರುವ ಗಿಲ್ಲಿ ಅಭಿಮಾನಿಗಳು, ಗಿಲ್ಲಿಯನ್ನೂ ಕರೆಸಿ ಎಂದು ಆಗ್ರಹಿಸಿದ್ದಾರೆ. ಬೋರಿಂಗ್ ಆಗಿದ್ದ ಬಿಗ್ಬಾಸ್ ಮನೆಗೆ ರಕ್ಷಿತಾ ಆಗಮನದಿಂದ ಏನಾದ್ರೂ ಚೇಂಜಸ್ ಆಗತ್ತಾ..? ರಕ್ಷಿತಾ ಜತೆ ಇನ್ನೂ ಯಾರ್ಯಾರೂ ಈ ಮನೆಗೆ ಬರ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.




