Political News: ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಸಾಧಿಸಿರುವ ಭರ್ಜರಿ ಗೆಲುವು, ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ದೊಡ್ಡ ಶುಭ ಸೂಚನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ನಡೆದ 28 ಎಂಎಲ್ಸಿ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೆ ಕಾಂಗ್ರೆಸ್ ಸಂಪೂರ್ಣವಾಗಿ ಧೂಳಿಪಟವಾಗಿದೆ.
‘ವೋಟ್ ಚೋರಿ’ ಎಂಬ ಸುಳ್ಳು ಕಥೆಯನ್ನು ಸದಾ ಸೃಷ್ಟಿಸುತ್ತಾ, ಪ್ರಜಾಪ್ರಭುತ್ವದ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುವ ಪಕ್ಷ, ಒಂದೇ ಒಂದು ಸೀಟನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಆಡಳಿತದಲ್ಲಿರುವ ಕರ್ನಾಟಕದಲ್ಲೂ, ಹಾಲಿ ಸದಸ್ಯರಿದ್ದ ಸ್ಥಾನವನ್ನೇ ಕಳೆದುಕೊಂಡಿದೆ. ಕಾಂಗ್ರೆಸ್ ಪದೇ ಪದೇ ಇವಿಎಂ (EVM) ಬಗ್ಗೆ ಮಾತನಾಡುತ್ತದೆ. ಆದರೆ, ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಿದರೂ ಫಲಿತಾಂಶ ಮಾತ್ರ ಬದಲಾಗಿಲ್ಲ.
ಚುನಾವಣಾ ಫಲಿತಾಂಶ ಬಂದಾಗಲೆಲ್ಲಾ ವ್ಯವಸ್ಥೆಯನ್ನು ಪದೇ ಪದೇ ದೂಷಿಸುವುದೇ ಕಾಂಗ್ರೆಸ್ ಪಕ್ಷದ ಚಟ. ಆದರೆ, ಜನಾದೇಶ ಮಾತ್ರ ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವವು ಇನ್ನಾದರೂ ವ್ಯವಸ್ಥೆಯ ಮೇಲೆ ಆರೋಪಗಳನ್ನು ಮಾಡುವುದು ಬಿಟ್ಟು, ತಮ್ಮ ಸಾಲು ಸಾಲು ಸೋಲುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.




