Chanakya Neeti: ಹಣ ಸಂಪಾದನೆ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ ನೋಡಿ..

Chanakya Neeti: ನಾವು ಆರ್ಥಿಕವಾಗಿ ಸಬಲರಾಗಬೇಕು, ಶ್ರೀಮಂತರಾಗಬೇಕು ಅಂದ್ರೆ ನಾವು ದುಡಿಮೆ ಬಗ್ಗೆ ಮಾತ್ರವಲ್ಲದೇ, ಉಳಿತಾಯ, ಹೂಡಿಕೆ, ದಾನ ಎಲ್ಲದರ ಬಗ್ಗೆ ಗಮನಹರಿಸಬೇಕು. ಈ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆ ಕೇಳೋಣ ಬನ್ನಿ.

ದುಡಿದ ಹಣವನ್ನು ಉಳಿತಾಯ ಮಾಡಲು ಪ್ರಾರಂಭಿಸಿ. ನಾವು ದುಡಿದ ಹಣದಲ್ಲಿ ಸ್ವಲ್ಪ ಪ್ರಮಾಣವನ್ನು ನಾವು ಉಳಿತಾಯ ಮಾಡಲೇಬೇಕು. ಹಾಗೆ ಉಳಿತಾಯ ಮಾಡಿದ್ದನ್ನು ಪ್ರಪ್ರಥಮವಾಗಿ ಹೂಡಿಕೆ ಮಾಡಬೇಕು. ಹಾಗೆ ಹೂಡಿಕೆ ಮಾಡಿದ್ದಲ್ಲಿ, ಭವಿಷ್ಯದಲ್ಲಿ ನಾವು ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡುತ್ತದೆ.

ದಾನ ಮಾಡಿ: ನೀವು ದುಡಿದ ಹಣದಲ್ಲಿ ಸ್ವಲ್ಪ ಪ್ರಮಾಣವಾದರೂ ನೀವು ದಾನ ಮಾಡಬೇಕು. ದಾನ ಮಾಡುವುದರಿಂದ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ ಅಂತಾರೆ ಚಾಣಕ್ಯರು.

ಎಲ್ಲಿ ಖರ್ಚು ಮಾಡಬೇಕೆಂದು ಸರಿಯಾಗಿ ತಿಳಿಯಿರಿ: ಚೆಂದವಾಗಿ ಕಂಡಿದ್ದೆಲ್ಲಾ ಖರೀದಿಸಿದರೆ ನೀವೆಂದೂ ಶ್ರೀಮಂತರಾಗಲು ಸಾಧ್ಯವಿಲ್ಲ. ಅವಶ್ಯಕತೆ ಇರುವ  ವಸ್ತುಗಳನ್ನು ಮಾತ್ರ ಖರೀದಿಸಬೇಕು. ಅನವಶ್ಯಕ ಖರ್ಚು ಮಾಡದೇ ಆ ಹಣವನ್ನು ಉಳಿಸಿ, ಹೂಡಿಕೆ ಮಾಡುವುದನ್ನು ಕಲಿಯಿರಿ.

ನಿಯತ್ತಿನ ದಾರಿಯಲ್ಲಿ ಹಣ ಸಂಪಾದಿಸಿ: ನೀವು ಅಕ್ರಮವಾಗಿ ಅಲ್ಲದೇ, ನಿಯತ್ತಿನಿಂದ ಹಣ ಸಂಪಾದನೆ ಮಾಡಿದ್ದಲ್ಲಿ ಮಾತ್ರ, ಆ ಹಣದ ಉಪಯೋಗವಾಗುತ್ತದೆ. ಅಲ್ಲದೇ ನೀವು ಕಡಿಮೆ ಹಣ ಸಂಪಾದಿಸಿದರೂ ಕೂಡ ಅದರ ಬಗ್ಗೆ ಕೀಳರಿಮೆ ಬೇಡ. ಕಡಿಮೆ ಹಣದಿಂದಲೂ ನೀವು ನಿಮ್ಮ ಜೀವನವನ್ನು ಸಿಂಪಲ್ ಆಗಿದ್ದು ಮ್ಯಾನೇಜ್ ಮಾಡಬಹುದು. ಅಲ್ಲದೇ ಸಣ್ಣ ಹಣವನ್ನು ಹೂಡಿಕೆ ಮಾಡಿಯೂ, ಉತ್ತಮ ಭವಿಷ್ಯ ರೂಪಿಸಿಕ“ಳ್ಳಬಹುದು.

About The Author